Girl in a jacket

ಚಿರತೆಯ ಹೆಜ್ಜೆ ಗುರುತು ಪತ್ತೆ?


ಸುದ್ದಿಲೈವ್/ಸಾಗರ

ಸಾಗರ ತಾಲೂಕು ಮೇಲಿನ ಗೋಳಗೋಡು, ಖಂಡಿಕಾ, ಹುಳೇಗಾರು, ಗುಡ್ಡೆದಿಂಬ, ಕಲ್ಮಕ್ಕಿ ಗ್ರಾಮಗಳಲ್ಲೀಗ ಚಿರತೆಯೊಂದು ಭಯ ಮೂಡಿಸಿದ್ದು ಸಾಕು ಪ್ರಾಣಿಗಳು ಹಾಗೂ ದನಕರುಗಳಿಗೆ ಕಂಟಕವಾಗುವ ಭೀತಿ ಎದಿರಾಗಿದೆ.

ಚಿರತೆ ಕೆಲ ಗ್ರಾಮಸ್ಥರಿಗೆ ಕಂಡಿದೆಯಾದರೂ ಅರಣ್ಯ ಇಲಾಖೆ ಸಿಬ್ಬಂದಿಗೆ ಜಾಡು ಹಿಡಿಯಲು ಅಸಾಧ್ಯವಾದ ಕಾರಣ ಗ್ರಾಮಸ್ಥರೇ ಚಿರತೆ ಹೆಜ್ಜೆ ಫೊಟೋ‌ ತೆಗೆದು ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗೋಳಗೋಡು ಭಾಗದಲ್ಲಿ ಒಂದೂವರೆ ತಿಂಗಳಿನಿಂದ ಚಿರತೆಯೊಂದು ಓಡಾಟ ನಡೆಸುತ್ತಿದೆ. ಸಾಕು ನಾಯಿ, ದನಕರುಗಳನ್ನ ತಿಂದಿದೆ. ಗೋಳಗೋಡು ನಿವಾಸಿ ರತ್ನಮ್ಮ ಅವರ ಮನೆಯ ಅಂಗಳಕ್ಕೆ ಚಿರತೆ ಬಂದಿದ್ದು, ಜನರನ್ನ ನೋಡಿ ಕಾಲ್ಕಿತ್ತಿದೆ. ದಯವಿಟ್ಟು ಚಿರತೆಯನ್ನ ಸೆರೆ ಹಿಡಿಯಿರಿ ಅಥವಾ ಓಡಿಸಿ ಎಂದು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು, ಶರಾವತಿ ಕಣಿವೆಯಿಂದ ಯಾವ ಪ್ರಾಣಿಗಳು ಬೇಕಾದರೂ ಸುತ್ತಲ ಗ್ರಾಮದಲ್ಲಿ ಕಾಣಿಸಿಕೊಳ್ಳಬಹುದು, ಗ್ರಾಮಸ್ಥರ ಮನವಿ ಹಾಗೂ ಹೆಜ್ಜೆ‌ ಗುರುತು ಆಧಾರದ ಮೇಲೆ ಪರಿಶೀಲನೆ ನಡೆಸುತ್ತಿದ್ದೇವೆ ಎನ್ನುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close