Girl in a jacket

ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಸಿಟಿ ಬಸ್

 


ಸುದ್ದಿಲೈವ್/ಶಿವಮೊಗ್ಗ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸಿಟಿ ಬಸ್‌ವೊಂದು ಉರುಳಿ ಬಿದ್ದಿದೆ ಇಂದು ಬೆಳ್ಳಿಗೆ ಬೊಮ್ಮನ್ ಕಟ್ಟೆಯ ರೈಲ್ವೆ ಗೇಟ್ ಬಳಿ ಸಂಭವಿಸಿದೆ. 

ಈ ಅಪಘಾತದಲ್ಲಿ 20 ಜನ ಪ್ರಯಾಣಿಕರಿದ್ದ ಬಸ್ ನಲ್ಲಿ 8
ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಬೊಮ್ಮನ್ ಕಟ್ಟೆಯಿಂದ ಗೋಪಾಳಕ್ಕೆ ಹೋಗುತ್ತಿದ್ದ ವೀರಭದ್ರೇಶ್ವರ (ಕೆಎ 13-ಡಿ-5290 ಕ್ರಮ ಸಂಖ್ಯೆಯ)  ನಗರ ಸಂಚಾರ ಬಸ್ ಬೊಮ್ಮನ್ ಕಟ್ಟೆಯ ರೈಲ್ವೆ ಗೇಟ್ ಬಳಿ ಉರುಳಿ ಬಿದ್ದಿದೆ.
ರಸ್ತೆಯ ಹಂಪ್ಸ್ ಹಾರಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು 10 ಮೀಟರ್ ಕಬ್ಬಿಣದ  ತಂತಿಯಯನ್ನ ಮುರಿದು ಉರುಳಿಬಿದ್ದಿದೆ. ಇಬ್ಬರು ಮಕ್ಕಳು ಸೇರಿದಂತೆ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close