Girl in a jacket

ಅಂಧರಿಗೆ ಪತ್ರಕರ್ತನಿಂದ ವಂಚನೆಯ ಆರೋಪ



ಸುದ್ದಿಲೈವ್/ಶಿವಮೊಗ್ಗ

ಕೆಲಸ ಕೊಡಿಸುವುದಾಗಿ ಹೇಳಿ ಪತ್ರಕರ್ತರೊಬ್ಬರು ಅಂಧರೊಬ್ಬರಿಗೆ 2 ಲಕ್ಷದ 30 ಸಾವಿರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಧ ಬಸವರಾಜ್ ತನ್ನ ಮಗ ಗಗನ್ ದೀಪ್‌ಗೆ ನಗರಸಭೆಯಲ್ಲಿ  ಕೆಲಸ ಖಾಲಿಯಿದೆ. ಇಲ್ಲವೆಂದರೆ ಪತ್ರಕರ್ತರ ಕಚೇರಿಯೊಂದರಲ್ಲಿ ಕೆಲಸ ಆಗಲಿದೆ ಎಂದು ತಿಳಿಸಿದ್ದರು. ಪಾಲಿಜೆಯಲ್ಲಿ ಡಾಟಾ ಆಪರೇಟರ್ ಕೆಲಸಕ್ಕೆ 7-8 ಲಕ್ಷ ರೂ. ಬೇಡಿಕೆ ಇದೆ ಎಂದಿದ್ದರು. ಬೇಡ ಎಂದಾಗ ನಿಮ್ಮ ಹತ್ತಿರ ಎಷ್ಟು ಇದ್ದರೂ ಕೊಡಿ ಎಂದು ಹೇಳಿ  2 ಲಕ್ಷ ರೂ. ಹಣ ಪಡೆದಿದ್ದರು. ಹಣ ಪಡೆದ ನಂತರ ಮೊಬೈಲ್ ಹಾಗೂ ಇತರೆ ಸಂಪರ್ಕಗಳನ್ನ ಪತ್ರಕರ್ತರು ಕಡಿತ ಗೊಳಿಸಿಕೊಂಡಿರುವುದಾಗಿ ತಿಳಿಸಿದರು. 

ಇದನ್ನ ಕೇಳಲು ಮನೆಗೆ ಹೋದಾಗ ಸರ್ಕಾರಿ ಕೆಲಸ ಬೇಗ ಆಗುತ್ತಾ ಅಂತ ಹೇಳಿದ ಪತ್ರಕರ್ತರು. ಠಾಣೆ, ಎಸ್ಪಿ ಎಲ್ಲರ ಮುಂದೆ ಹೋದರೂ ದಿನಾಂಕ ಕೊಡ್ತಾರೆ. ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಡಿವೈಎಸ್ಪಿ ಎದುರೇ ಕುಳಿತು ಮುಚ್ಚಳಿಕೆ ಮತ್ತು ಚೆಕ್ ಕೊಟ್ಟಿದ್ದಾರೆ. ಆದರೆ ಯಾವ ಹಣವೂ ಬರ್ತಾ ಇಲ್ಲ.  ನ.05 ರಂದು ಮಗಳ ಮದುವೆ ಇದೆ. ಜವಳಿ ತೆಗೆದಿಲ್ಲ.  ಠಾಣೆಯಲ್ಲೂ ಎಫ್ಐಆರ್ ಆಗಿಲ್ಲ ಎಂದು ದೂರಿದರು. ಕಸ್ತೂರಿ ಬಾಯಿ, ಮಣಿ ಬಾಯಿ ಮಾಲ್ತೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close