ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮೆಡಿಕಲ್ ಹಬ್ ಆಗಿ ಬೆಳೆಯುತ್ತಿದ್ದು, ಸರ್ಜಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ವಿಷೇಶ ಚಿಕಿತ್ಸೆ ಆರಂಭ ಎಂದು ಎಂಎಲ್ ಸಿ ಹಾಗೂ ವೈದ್ಯರಾದ ಡಾ.ಧನಂಜಯ ಸರ್ಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ಕಾಯಿಲೆಗೆ ಮೊದಲು ಆಪರೇಷನ್ ಬೇಕಿತ್ತು. ಸ್ಟಂಟಿಂಗ್ ಚಿಕಿತ್ಸೆ ಇದೆ. ಜೀವವನ್ನ ಕಳೆದುಕೊಳ್ಳುವ ರೋಗದಲ್ಲಿ ಮೊದಲು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಇದೆ, ನಂತರದ ಸ್ಥಾನ ಮೆದುಳು ನಿಷ್ಕ್ರಿಯತೆ ಕಾಯಿಲೆ ಸ್ಥಾನ ಪಡೆದಿದೆ. ಮೆದಳಿನಲ್ಲಿ ರಕ್ತನಾಳ ಬ್ಲಾಕ್ ಆದರೆ ಸ್ಟ್ರೋಕ್ ಅಂತ ಕರೆಯುತ್ತೇವೆ.
ಕಾಯ್ಲಿಂಗ್ ಪದ್ಧತಿ ಚಿಕಿತ್ಸೆಯನ್ನ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ. ಕರ್ನಾಟಕದ ಮಧ್ಯಭಾಗದಲ್ಲಿ ಆರಂಭವಾಗಿರುವ ಈ ಚಿಕಿತ್ಸೆಯನ್ನ ಸರಳ ಮೊತ್ತದಲ್ಲಿ ಆರಂಭಿಸಲಾಗಿದೆ. ನ್ಯೂರೋಸರ್ಜನ್, ಡಾ.ಹರೀಶ್, ನ್ಯೂರೋ ಫಿಜಿಷಿಯನ್ ಡಾ.ಪ್ರಶಾಂತ್, ಡಾ.ವಾದಿರಾಜ್ ಮತ್ತು ತಂಡ ಅವರಂತಹ ನುರಿತ ತಜ್ಞರಿಂದ ಚಿಕಿತ್ಸೆ ಪಡೆಯಬಹುದಾಗಿದೆ. ಬೆಂಗಳೂರಿಗೆ ಹೋಲಿಸಿದರೆ ಕಡಿಮೆ ಹಣದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ನಾಟಿ ಔಷಧಿಯನ್ನ ದೂಷಿಸೊಲ್ಲ. ಆದರೆ ನಾಟಿ ಔಷಧಿಗೆ ಹೋಗುವ ಬದಲು ಈ ಚಿಕಿತ್ಸೆ ಪಡೆದರೆ ರೋಗಿ ಓಡಾಡುವಷ್ಟು ರಿಸಲ್ಟ್ ಸಿಕ್ಕಿದೆ. ಚಿಕಿತ್ಸೆ ಪಡೆದರೆ ಸಾಯುವುದರಿಂದ ರೋಗಿಯನ್ನ ಬಜಾವ್ ಮಾಡಬಹುದು. ಆದರೆ ಅವರು ವರ್ಷಗಟ್ಟಲೆ ಬೆಡ್ ರಿಡನ್ ಆಗಿರ್ತಾರೆ. ಕಾಯ್ಲಿಂಗ್ ಚಿಕಿತ್ಸೆಯಿಂದ ಮರುದಿನವೇ ರೋಗಿ ಓಡಾಡಿರುವ ಉದಾಹರಣೆ ಇದೆ ಎಂದರು.
ಸರ್ಕಾರಕ್ಕೆ ಗಮನಸೆಳೆಯವ ಬಗ್ಗೆ ಒಂದು ಹೋರಾಟದ ಅಗತ್ಯವಿದೆ. ಸಿಜಿಹೆಚ್ ಎಸ್ ಹಣ ಹೆಚ್ಚಿಸಿದರೆ ಆಯುಷ್ ಮಾನ್ ಭಾರತ್‌ಗೆ ಮೌಲ್ಯ ಸಿಗಲಿದೆ. ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸಾಗಿ ಬರುವ ಪ್ರಕರಣಗಳಿಗೆ ಸರ್ಕಾರದ ಸಿಜಿಹೆಚ್ ಎಂದು ಕರೆಯುತ್ತೇವೆ. ಸಿಜಿಹೆಚ್ ದರ ಹೆಚ್ಚಿಸಿದರೆ ಆಯುಷ್ ಮಾನ್ ಭಾರತ್ ಆರೋಗ್ಯ ಕರ್ನಾಟಕಕ್ಕೆ ಬೆಲೆ ಸಿಗುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಿದೆ ಎಂದರು.
ನ್ಯೂರೋ ಸರ್ಜನ್ ಡಾ.ಪ್ರಶಾಂತ್ ರಕ್ತ ಶ್ರಾವ, ರಕ್ತನಾಳದ ಗೊಂಚಲುಗಳಿಂದ ನರಳಾಡುತ್ತಿದ್ದರೆ. ಸ್ಟ್ರೋಕ್ ಆದವರಿಗೆ ಅಂತಹವರಿಗೆ ಸೂಜಿ ಇಲ್ಲದೆ ಚಿಕಿತ್ಸೆ ಮಾಡಬೇಕಾಗುತ್ತದೆ. ಕಾಯ್ಲಿಂಗ್ ಚಿಕಿತ್ಸೆಯಿಂದ ಒಪನ್ ಚಿಕಿತ್ಸೆಯ ಭಯವಿರಲ್ಲ. ನೋವಿರಲ್ಲ. ಒಂದೇ ಚಿಕಿತ್ಸೆಯಿಂದ ಎರಡು ಚಿಕಿತ್ಸೆಯ ಲಾಭವಾಗುತ್ತದೆ ಎಂದರು.
ಸ್ಟ್ರೋಕ್ ಆದಾಗ ಎರಡು ಗಂಟೆಯ ಸಮಯ ತುಂಬ ಕ್ರೂಷಿಯಲ್ ಆಗಿರುತ್ತದೆ. ತಕ್ಷಣವೇ ಆಸ್ಪತ್ರೆಗೆ ಕರೆತಂದ್ರೆ ಸ್ಟ್ರೋಕ್ ಇಲ್ಲದೆ ನಾರ್ಮಲ್ ಆಗುವಂತೆ ಚಿಕಿತ್ಸೆ ನೀಡುವ ಮೂಲಕ ರೋಗಿಯನ್ನ ಗುಣಪಡಿಸಬಹುದು. ಈ ಚಿಕಿತ್ಸೆಗೆ ಸರ್ಕಾರದ ಅನುದಾನವಿಲ್ಲ ಎಂದರು.
ಸರ್ಜಿ ಆಸ್ಪತ್ರೆಯ ಆಡಳಿತ ಅಧಿಕಾರಿ ಪುರುಷೋತ್ತಮ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.