Girl in a jacket

ಪೌರಕಾರ್ಮಿಕ ದಸರಾದಲ್ಲಿ ತಮಟೆಯ ನಾದಕ್ಕೆ ಶಾಸಕರ ಭರ್ಜರಿ ಸ್ಟೆಪ್ಸ್



ಸುದ್ದಿಲೈವ್/ಶಿವಮೊಗ್ಗ

ದಸರಾ ಕಾರ್ಯಕ್ರಮದ ಅಂಗವಾಗಿ ಈ ಬಾರಿ ಮೊದಲ ಬಾರಿ ಪೌರ ಕಾರ್ಮಿಕರ ದಸರಾ ಆರಂಭಗೊಂಡಿದೆ.  ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಧ್ಯಕ್ಷ ಅಮೃತ್ ರಾಜ್ ಪಾಲ್ ಕಾರ್ಯಕ್ರಮ ಮೊದಲ ಬಾರಿಗೆ ಆಯೋಜನೆಗೊಂಡ ಪೌರಕಾರ್ಮಿಕ ದಸರಾವನ್ನ ಉದ್ಘಾಟಿಸಿದರು. 

ಮೈಸೂರಿನ ಯುವ ದಸರಾದಲ್ಲಿ ನೃತ್ಯವಾಡಿದ್ದ  ಕಲಾತಂಡ ಶಿವಮೊಗ್ಗದ ಪೌರಕಾರ್ಮಿಕ ದಸರಾಕ್ಕೆ ಕರೆತಂದು ಪ್ರದರ್ಶಿಸಲಾಯಿತು. ಈ ವೇಳೆ ತಮಟೆಯ ನಾದಕ್ಕೆ ಶಾಸಕ ಚೆನ್ನಬಸಪ್ಪ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದರು. 

ನಂತರ ನಾಟಕ ಪ್ರದರ್ಶನ, ಜಾನಪದ ನೃತ್ಯ ಹಾಗೂ ಗೀತೆ ನಡೆದವು.‌ ಈ ವೇಳೆ ಮಾಜಿ ಕಾರ್ಪರೇಟರ್ ಹೆಚ್ ಸಿ ಯೋಗೀಶ್ ಮಾತನಾಡಿ, ಪೌರಕಾರ್ಮಿಕ ದಸರಾ ಇಂದು ಆರಂಭವಾಗಿದೆ. ಇದು ಸೂರ್ಯಚಂದ್ರ ಇರುವವರಿಗೂ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.‌

ಪೌರಕಾರ್ಮಿಕರ ಕಾರ್ಯಕ್ರಮಕ್ಕೆ ಜನ ಕಿಕ್ಕಿರಿದು ತುಂಬಿದ್ದರು. ಮೊದಲಬಾರಿಗೆ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿದ್ದರು. 14 ಸೆಕೆಂಡಿನ ಶಾಸಕರ ನೃತ್ಯ ಪೌರಕಾರ್ಮಿಕನ್ನ ಮತ್ತಷ್ಟು ಹುರಿದುಂಬಿಸಿತ್ತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close