Girl in a jacket

ಕರ್ನಾಟಕ ಸಂಘದ ಬಳಿ ತಪಾಸಣೆ ನಡೆಯುತ್ತಿದ್ದ ವೇಳೆ ಸಂಭವಿಸಿದ ಪ್ರಕರಣ ಈಗಿನ ಬಾನೆಟ್ ಮೇಲೆ ಪೊಲೀಸರನ್ನ ಎತ್ತಾಕಿಕೊಂಡು ಹೋದ ಪ್ರಕರಣಕ್ಕಿಂತ ರೋಚಕವಾಗಿತ್ತು-ಕರ್ತವ್ಯ ಮೆರೆದಿದ್ದರು ಇದೇ ಪಿಎಸ್ಐ ಮಠಪತಿ



ಸುದ್ದಿಲೈವ್/ಶಿವಮೊಗ್ಗ

ಕಾರಿನ ಚಾಲಕನ ವಿರುದ್ಧ ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಆರೋಪಿಯನ್ನ ಬಂಧಿಸಲಾಗಿದೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ವೇಗದ ಮಿತಿ ಮೀರಿ ಚಲಾಯಿಸಿದ ಪ್ರಕರಣದಲ್ಲಿ ಭದ್ರಾವತಿ ಕಡೆಗೆ ಹೊರಟಿದ್ದ ಕಾರನ್ನ ತಪಾಸಣೆಗಾಗಿ ನಿಲ್ಲಿಸುವ ಯತ್ನವನ್ನ ನಿನ್ನೆ ಸಹ್ಯಾದ್ರಿ ಕಾಲೇಜಿನ ವೇಳೆ ಪೂರ್ವ ಸಂಚಾರಿ ಪೊಲೀಸರು ನಡೆಸಿದ್ದಾರೆ.

ಮಿಥುನ್ ಜಗದಾಳೆ

ನಿಲ್ಲಿಸುವಂತೆ ಸೂಚಿಸಿದರೂ ಕಾರನ್ನ ಚಲಾಯಿಸಿಕೊಂಡು ಕಾರು ಚಾಲಕ ಮುಂದೆ ಸಾಗಿದ್ದಾನೆ. ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಕುಳಿತರೂ ಮುಂದೆ ಸಾಗಿ ನಂತರ ನಿಲ್ಸಿದ ಪರಿಣಾಮ ಸಿಬ್ಬಂದಿ ಬಜಾವ್ ಆಗಿದ್ದಾರೆ. ಈ ವಿಡಿಯೋ 

ಈ  ವಿಷಯಕ್ಕೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ದೂರಿನ ಅಡಿ ಕಾರು ಚಾಲಕ ಮಿಥುನ್ ಜಗದಾಳೆ ಎಂಬುವನನ್ನ ಬಂಧಿಸಲಾಗಿದೆ ಎಂದು ಎಸ್ಪಿ ವಿವರಿಸಿದ್ದಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಕೊಲೆಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಕಾರುಚಾಲಕನನ್ನ ಬಂಧಿಸಲಾಗಿದೆ. 

ಈ ಹಿಂದೆ ಕರ್ನಾಟಕ ಸಂಘದಲ್ಲಿ ಇದೇ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿಯ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ರೌಡಿ‌ಶೀಟರ್ ಒಬ್ಬ ಪೊಲೀಸರೇ ಹೊಡೆದಿದ್ದಾರೆ ಎಂದು ಬಿಂಬಿಸಿ ನೆಲಕ್ಕೆ ಬಿದ್ದಿದ್ದನು. ಪೊಲೀಸರ ವಿರುದ್ಧವೇ ಆರೋಪ ಮಾಡಿ ಸ್ಥಳೀಯ ಜನರನ್ನ ಪೊಲೀಸರ ವಿರುದ್ಧವೇ ತಿರುಗಿಬೀಳುವಂತೆ ನಟಿಸಿದ್ದನು.

ಈ ವೇಳೆ ಪೊಲೀಸರೆ ನಂತರ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಕರ್ತವ್ಯ ಮೆರೆದಿದ್ದರು. ಪಿಎಸ್ಐ ಮಠಪತಿ ಅವರ ಕರ್ತವ್ಯ ಪ್ರಜ್ಞೆಯಿಂದ ಪ್ರಕರಣ ತಿಳಿಗೊಂಡಿತ್ತು. ರೌಡಿಶೀಟರ್ ಈಗ ಜೀವಂತವಾಗಿ ಉಳಿದಿಲ್ಲ. ಆದರೆ ಆಗಲೂ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close