ಹಾವೇರಿಯ ಶಿವಬಸವ ನಗರ, ವಿದ್ಯಾನಗರದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಅಡಿಯಲ್ಲಿ ಸೋಮವಾರ ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್ ನೂತನವಾಗಿ ಶುಭಾರಂಭಗೊಂಡಿತು.
ಇದೇ ವೇಳೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಶಾಸಕರು ಹಾಗೂ ಸರ್ಜಿ ಆಸ್ಪತ್ರೆಯ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಜಯ ಸರ್ಜಿಅವರು, ಮಲೆನಾಡಿನ ಶಿವಮೊಗ್ಗದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಕೈಗೆಟುಕುವ ದರೊಂದಿಗೆ ಉತ್ಕೃಷ್ಟ ಗುಣಮಟ್ಟದ ಸೇವೆ ನೀಡುತ್ತಾ ಬಂದಿದೆ.
ಇದೀಗ ಹಾವೇರಿ ಭಾಗದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾವೇರಿಯಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಹೆಸರಾಂತ ವೈದ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮಧು ಕೆ.ಆರ್. ಅವರ ಹಿಂದಿನ ಶ್ರೀ ರೇಣುಕಾ ಹೆಲ್ತ್ ಕ್ಲಿನಿಕ್ ಅನ್ನು ಇದೀಗ ನವೀಕರಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಆರಂಭಿಸಲಾಗಿದೆ. ಶಿವಮೊಗ್ಗದಲ್ಲಿ 1000 ಜನ ಸಿಬ್ಬಂದಿ ಹಾಗೂ 100 ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ, ಇದು ಸದ್ಯಕ್ಕೆ 55 ಹಾಸಿಗೆಗಳನ್ನು ಒಳಗೊಂಡಿದೆ, ಮಾರ್ಚ್ ತಿಂಗಳಲ್ಲಿ 100 ಹಾಸಿಗೆ ವಿಸ್ತರಣೆ ಮಾಡಲಾಗುವುದು. ಹಾವೇರಿಗೆ ಎಲ್ಲ ಸೌಲಭ್ಯಗಳ ಆಸ್ಪತ್ರೆ ಸಿಬ್ಬಂದಿ, ಇದು ಸಿ ಟಿ ಸ್ಕ್ಯಾನ್, ಎಂಆರ್ ಐ ಸ್ಕ್ಯಾನ್ ಹಾಗೂ ಕಾರ್ಡಿಯಾಕ್ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ಹೆಸರಾಂತ ವೈದ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮಧು ಕೆ.ಆರ್. ಅವರು ಮಾತನಾಡಿ, ಮೂಳೆರೋಗ, ಸಾಮಾನ್ಯ ರೋಗ ತಜ್ಞ ವೈದ್ಯರು ಚಿಕಿತ್ಸಾ ಸೌಲಭ್ಯ ನೀಡಲಿದ್ದಾರೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಿ.ಡಾ.ಜಿ.ಜೆ.ದೇವಧರ ಅವರ ಪತ್ನಿ ರೊ.ಮಾಧುರಿ ದೇವಧರ, ಪುತ್ರ ಸಂಜಯ್ ದೇವಧರ, ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿ ನಮಿತ ಸರ್ಜಿ, ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್, ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ಡಾ.ನವೀನ್, ಡಾ.ಸಚಿನ್, ಡಾ. ರಾಘವಾಂಕ ಸೇರಿದಂತೆ ಸಿಬ್ಬಂದಿ ವರ್ಗವದವರು ಹಾಜರಿದ್ದರು. ಇದಕ್ಕೂ ಮೊದಲು ಪೂಜೆ, ಹೋಮ ಹವನ ನೆರವೇರಿಸಲಾಯಿತು.