ಸುದ್ದಿಲೈವ್/ಶಿವಮೊಗ್ಗ
ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಲು ತಾಲೀಮು ಹಿನ್ನಲೆಯಲ್ಲಿ ಈ ಬಾರಿ ಸಕ್ರೆಬೈಲಿನ ಬಿಡಾರದಿಂದ ಮೂರು ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಸಂಜೆ ನಗರಕ್ಕೆ ಬಂದ ಆನೆಗಳಿಗೆ ಪೂಜೆ ಸಲ್ಲಿಸಿ, ಸ್ವಾಗತಿಸಲಾಯಿತು.
ಸಕ್ರೆಬೈಲು ಬಿಡಾರದ ಸಾಗರ, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಮಂಗಳವಾದ್ಯ ಸಹಿತ ಆನೆಗಳನ್ನು ಸ್ವಾಗತಿಸಲಾಯಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲದಿಂದ ಪೂಜೆ ಸಲ್ಲಿಸಿದ ಬಳಿಕ ಶಾಸಕ ಚನ್ನಬಸಪ್ಪ, ಆಯುಕ್ತೆ ಕವಿತಾ ಯೋಗಪ್ಪನವರ್, ವೈದ್ಯೆ ಡಾ.ರೇಖಾ ಮೊದಲಾದವರು ಆನೆಗಳಿಗೆ ಪೂಜಿಸಿದರು.
ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಲು ವ್ಯವಸ್ಥೆ ಮಾಡಲಾಗಿದೆ. ಆನೆಗಳ ಜೊತೆಗೆ ಬಿಡಾರದಿಂದ ಮಾವುತರು, ಕಾವಾಡಿಗಳು ಆಗಮಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಆನೆಗಳಿಗೆ ತಾಲೀಮು ನಡೆಸಲಾಗುತ್ತದೆ. ಶಿವಮೊಗ್ಗ ದಸರಾದಲ್ಲಿ ಸಾಗರ ಆನೆ ಅಂಬಾರಿ ಹೊರಲಿದೆ.
Tags:
ಸಕ್ರೈಬೈಲಿನ ಆನೆ