ಸುದ್ದಿಲೈವ್/ಶಿವಮೊಗ್ಗ
ಜಾತಿಗಣತಿ ವಿಚಾರದ ಕುರಿತು ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ. ಜಾತಿ ಗಣತಿ ಮಂಡನೆಗೆ 7 ನೇ ತಾರೀಖು ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡ್ತಿದ್ದೇವೆ ಎಂದು ತಿಳಿಸಿದರು.
ಮಾಧ್ಯಾಮದೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಹೊರಗೆ ಬಿಟ್ಟಾಗ ಗೊತ್ತಾಗುತ್ತದೆ. ಜಾತಿಗಣತಿ ಬರಬೇಕು ಅಂತ. ರಾಹುಲ್ ಗಾಂಧಿ ಅವರು ರಾಷ್ಟ್ರ ಮಟ್ಟದಲ್ಲಿ ಜಾತಿಗಣತಿ ಆಗಬೇಕು ಅಂದಿದ್ದಾರೆ. ಸಮಾನತೆ ಬರಬೇಕು ಅಂದ್ರೆ ವಾಸ್ತವಾಂಶ ಗೊತ್ತಾಗಬೇಕು. ವಾಸ್ತವಾಂಶ ಗೊತ್ತಾಗಲಿಲ್ಲ ಅಂದ್ರೆ ಹೇಗೆ? ವಾಸ್ತವಾಂಶ ತಪ್ಪಿದ್ದರೆ ಮತ್ತೆ ಚರ್ಚೆ ಮಾಡಿ ಸರಿಮಾಡಬೇಕು. ನಾನು ಸಹ ಜಾತಿಗಣತಿ ಪರ ಇದ್ದೇನೆ ಎಂದರು.
ಜಾತಿಗಣತಿ ವರದಿ ಸಿದ್ದವಾಗಿದೆ. ಅದನ್ನು ಆದಷ್ಟು ಬೇಗ ಹೊರಗೆ ಬಿಡೋದು ಒಳ್ಳೆಯದು. ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ವರದಿ ಬಂದ ನಂತರ ನೋಡಬೇಕು. ವರದಿ ಬಂದ ಮಾತ್ರಕ್ಕೆ ಅದೇನು ಕಾನೂನು ಏನಲ್ಲ. ಬಂದ ಮೇಲೆ ಚರ್ಚೆ ಆಗ್ತದೆ ಎಂದರು.
ವರದಿ ಬಂದ ನಂತರ ಸರಕಾರ ಚರ್ಚೆಗೆ ಬಿಡಲಿದೆ. ಚರ್ಚೆಯಾದ ನಂತರ ಅನುಷ್ಠಾನದ ಬಗ್ಗೆ ಪರ ವಿರೋಧ ಇದ್ದೆ ಇರುತ್ತದೆ. ಅದು ಪಕ್ಷಾತೀತವಾಗಿ ಇರುತ್ತದೆ. ಸಾಮಾಜಿಕ ನ್ಯಾಯ ಕೊಡಬೇಕು ಅಂದ್ರೆ ಅದು ಜಾತಿಗಣತಿಯಿಂದ ಮಾತ್ರ ಸಾಧ್ಯ ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯುಸಿದ ಸಚಿವರು, ಆರ್.ಅಶೋಕ್ ತುಂಬಾ ಕಳ್ಳತನ ಮಾಡಿರಬಹುದು. ಸಿಎಂ ರಾಜೀನಾಮೆ ಕೊಡಲ್ಲ ಅಂದಿದ್ದಾರೆ. ವಿಪಕ್ಷದವರದ್ದು ಎಲ್ಲಾ ಶುರು ಆಗುತ್ತದೆ ಈಗ. ಈಗಾಗಲೇ ಆರಂಭ ಆಗಿರುವುದರಿಂದ ಅವರಿಗೂ ಭಯ ಶುರುವಾಗಿದೆ ಎಂದರು.
ಜಿ.ಟಿ.ದೇವೇಗೌಡರು ಸಿಎಂ ರಾಜೀನಾಮೆ ಕೊಡೋದು ಬೇಡ, ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅಂದ್ರು. ರಾಜಕಾರಣದಲ್ಲಿ ಒಬ್ಬರನ್ನು ದ್ವೇಷ ಮಾಡೋದಲ್ಲ. ಒಬ್ಬ ಒಂದು ಕೆಲಸ ಮಾಡ್ತಾನೆ ಅಂದ್ರೆ ಅದನ್ನು ಎತ್ತಿ ಹಿಡಿಯಬೇಕು. 12 ವರ್ಷದ ಹಳೆ ಕಥೆ ತಂದು ತಿಕ್ಕಿತಿಕ್ಕಿ ಇಡುತ್ತಿದ್ದಾರೆ ಜನರಿಗೆ ತಲೆ ಕೆಟ್ಟಿದೆಯಾ? ಪ್ರಜಾಪ್ರಭುತ್ವದಲ್ಲಿ ಅನುಷ್ಠಾನ ಆಗಿರುವ ಸರಕಾರವನ್ನು ಬೀಳಿಸಲು ಹಗುರವಾಗಿ ಮಾಡ್ತಿದ್ದಾರೆ ಎಂದು ದೂರಿದರು.
ಬಿಜೆಪಿಯ ರಾಜ್ಯಾಧ್ಯಕ್ಷರಿಂದ ಹಿಡಿದು ಎಲ್ಲರ ಹತಾಶೆ ತೋರಿಸುತ್ತಿದೆ. ಇದು ಬಿಜೆಪಿಯ ವೀಕ್ನೆಸ್ ಎಂದು ದೂರಿದರು.
ಇದನ್ನು ಓದಿ
https://www.suddilive.in/2024/10/blog-post_31.html