Girl in a jacket

ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು ಅಪಘಾತದಲ್ಲಿ ಶಿಕ್ಷಕಿ ಸಾವು



ಸುದ್ದಿಲೈವ್/ಅಗರದಹಳ್ಳಿ

ಸಾಗರ ತಾಲೂಕಿನ ಸಿರವಂತೆಯ ಸರ್ಕಾರಿ ಶಾಲೆ ಶಿಕ್ಷಕಿ ಶಕುಂತಲ ಆಗರದಹಳ್ಳಿ ಕ್ರಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. 

ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಗ್ರಾಮದ ಶಕುಂತಲ (೨೬) ಮೃತಪಟ್ಟ ಶಿಕ್ಷಕಿಯಾಗಿದ್ದಾರೆ. 

ಮಾವಿನಕಟ್ಟೆಯ ಶಕುಂತಲ ಸಾಗರ ಸಮೀಪದ ಸಿರವಂತೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಿ,ಇಡಿ ಓದುವಾಗ ಸ್ನೇಹಿತೆಯಾಗಿದ್ದವಳ ಮನೆಗೆ ಬಂದು ವಾಪಾಸ್ ಆಗುವಾಗ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. 

ಗುರುವಾರ ತಡಸದ ಸ್ನೇಹಿತೆ  ಪೂಜಾಳಾ ಮನೆಗೆ ಬಂದಿದ್ದ ಶಕುಂತಲಳನ್ನು ಶುಕ್ರವಾರ ಬೆಳಗ್ಗೆ ಪೂಜಾನ ತಮ್ಮ ನಿಖಿಲ್ ಶಿವಮೊಗ್ಗಕ್ಕೆ ಕಳಿಸಲೆಂದು ಬೈಕ್‌ನಲ್ಲಿ ಆಗರದಹಳ್ಳಿ ಕ್ರಾಸ್‌ಗೆ ಕರೆದುಕೊಂಡು ಹೋಗುವಾಗ ರಸ್ತೆ ಅಪಘಾತವಾಗಿದೆ. 

ಶಿವಮೊಗ್ಗ ಕಡೆಯಿಂದ ಬಂದ ಲಾರಿ ಗುದ್ದಿದೆ ಲಾರಿ ಚಕ್ರದಡಿ ಸಿಲುಕಿದ ಶಿಕ್ಷಕಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ. ಗಂಬೀರವಾಗಿ ಗಾಯಗೊಂಡಿದ ನಿಖಿಲ್‌ನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close