ಸಂಸದರು ಹಾಡಿ ಹೊಗಳಿದ ಎರಡೇ ದಿನಕ್ಕೆ ವಿಮಾನ ಹಾರಾಟ ರದ್ದು

 


ಸುದ್ದಿಲೈವ್/ಶಿವಮೊಗ್ಗ

ಸಂಸದರ ಹೊಗಳಿಕೆ ಮಧ್ಯೆಯೇ ಹೊಸದಾಗಿ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ಹಾರಾಟ ರದ್ದಾಗಿದೆ. ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಹೇಳುತ್ತಿದ್ದು ಹೈದ್ರಾಬಾದ್ ನಿಂದ ಶಿವಮೊಗ್ಗ, ಶಿವಮೊಗ್ಗದಿಂದ ಚೆನ್ನೈಗೆ ಹಾರಾಡಬೇಕಿದ್ದ ವಿಮಾನ ಹಾರಾಟ ರದ್ದಾಗಿದೆ.

ಸಂಸದರ ಪ್ರತಿಷ್ಠೆಯ ಕೂಸಾಗಿರುವ ವಿಮಾನ ನಿಲ್ದಾಣ ಅಡೆತಡೆಗಳಲ್ಲಿಯೇ  ಮುಂದೆ ಸಾಗಿದೆ. ಡಿಎಸಿಇ ದಂಡಗಳು, ನೈಟ್ ಲ್ಯಾಂಡ್ ಸಮಸ್ಯೆಗಳಿಂದ ಬಳಲುತ್ತಿರುವ ವಿಮಾನ ನಿಲ್ದಾಣ ಯಾರದ್ದೋ ಪ್ರತಿಷ್ಠಗಳಿಂದ ನಡೆಯುತ್ತಿರುವುದು ಸತ್ಯ ಬಿಟ್ಟರೆ ತೆರಿಗೆ ಹಣ ವ್ಯರ್ತವಾಗಿದೆ ಎಂಬುದಂತು ಸತ್ಯ.

ಪ್ರತಿಷ್ಠೆಯ ನಡುವೆ ಸಾರ್ವಜನಿಕರ ಹಣ ವ್ಯರ್ತವಾಗುವುದು ಬಿಟ್ಟರೆ ಯಾರದ್ದು ಏನು ಹಾಳಗಲಿದೆ ಹೇಳಿ. ಅ. 10 ರಂದು ಆರಂಭವಾಗಿದ್ದ ವಿಮಾನ ಇಂದು ಹಾರಾಟವನ್ನ ರದ್ದುಗೊಳಿಸಿವೆ. ಟಿಕೆಟು ಮಾಡಿಸಿರುವ ಪ್ರಯಾಣಿಕರ ಗೋಳು ಕೇಳದಂತಾಗಿದೆ.

ಅತಿ ಹೆಚ್ಚು ವಿಮಾನ ಹಾರಾಟವೆಂದು ಕೆಲ ಪತ್ರಿಕೆಗಳು ಹಾಡಿಹೊಗಳಿದ್ದವು. ಸಂಸದರು ಇದನ್ನ ಹಾಡಿಹೊಗಳಿದ್ದವು. ಆದರೆ ಸುದ್ದಿಲೈವ್ ಖಡಕ್ ಸುದ್ದಿಯ ಮೂಲಕ ಹಲವು ಸಂಗತಿಯನ್ನ ಬಿಚ್ಚಿಟ್ಟಿತ್ತು. ಅದಾಗಿ ಎರಡೇ ದಿನಕ್ಕೆ ಈ ಸಮಸ್ಯೆ ಎದುರಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close