Girl in a jacket

ಮೂಡಾ ಕಚೇರಿಯ ಮೇಲೆ ಇಡಿ ದಾಳಿಯನ್ನ ಸ್ವಾಗತಿಸಿದ ಆರಗ



ಸುದ್ದಿಲೈವ್/ಶಿವಮೊಗ್ಗ

ಮೈಸೂರಿನ ಮೂಡಾ ಕಚೇರಿಯ ಮೇಲೆ ಇಡಿ ದಾಳಿ ಮಾಡಿರುವುದನ್ನ ಶಾಸಕ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿ, ಮೂಡಾ ಕಚೇರಿಯಲ್ಲಿ ದಾಖಲೆಗಳೇ ಇಲ್ಲ. ಇದು ದೊಡ್ಡ ಹಗರಣವಾಗಿದೆ. ನಮ್ಮನ್ನ ಆಳುವಂತಹ ಸಿಎಂ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಅವರು ಕಳಂಕ ರಹಿತವಾಗಿದ್ದರೆ ರಾಜ್ಯಕ್ಕೆ ಮಾದರಿಯಾಗ್ತಾರೆ.

ಮೂಡ ಕಚೇರಿಯ ದಾಖಲೆಗಳನ್ನ ನಗರಾಭಿವೃದ್ದಿ ಸಚಿವರನ್ನ ಕಳುಹಿಸಿ ಬೆಂಗಳೂರಿಗೆ ತಂದು ಇರಿಸಲಾಗಿದೆ. ಇಡಿ ಇದನ್ನ ಹುಡುಕಬೇಕು. ಯಾವ ಪಕ್ಷದವರೆ ಇದ್ದರೂ, ಕಾನೂನು ಬಾಹಿರವಾಗಿ ನಡೆದುಕೊಂಡವರ ವಿರುದ್ಧ ಕ್ರಮವಾಗಬೇಕು ಎಂದರು.

ಇಡಿ ದುರ್ಬಳಕೆ ಆಗುತ್ತಿದೆ ಎಂಬ ಕಾಂಗ್ರೆಸ್ ಗೆ  ಎಸ್ಐಟಿ ಯನ್ನ ದುರ್ಬಳಕೆ ಮಾಡಿಕೊಳ್ಳಲಿಲ್ವಾ ಎಂದು ತಿರುಗೇಟು ನೀಡಿದ ಆರಗ ಜ್ಞಾನೇಂದ್ರ, ಉಪಚುನಾವಣೆಯ ಅಭ್ಯರ್ಥಿಯನ್ನ ಹಿರಿಯರು ನಿರ್ಧರಿಸಲಿದ್ದಾರೆ. ಯೋಗೀಶ್ ಚನ್ನಪಟ್ಟಣದಿಂದ ಪಕ್ಷ ಅಭ್ಯರ್ಥಿಯಾಗಲು ಟಿಕೆಟ್ ಕೇಳಿರುವುದರಲ್ಲಿ ತಪ್ಪಿಲ್ಲ. ನಮ್ಮ ಪಕ್ಷದಲ್ಲಿಯೇ ಇದ್ದರೆ ಅವರಿಗೆ ಉತ್ತಮ ಭವಿಷ್ಯವಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close