Girl in a jacket

ಆಕಸ್ಮಿಕ ಬೆಂಕಿ, ವಾಸದ ಮನೆ ಭಾಗಶಃ ಭಸ್ಮ



ಸುದ್ದಿಲೈವ್/ಹೊಸನಗರ

ಆಕಸ್ಮಿಕ ಬೆಂಕಿಯಿಂದಾಗಿ ವಾಸದ ಮನೆ ಭಾಗಶಃ ಸುಟ್ಟು ಹೋದ ಘಟನೆ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಎಂಬಲ್ಲಿ ಭಾನುವಾರ ನಡೆದಿದೆ.

ವಿಶಾಲಾಕ್ಷಿಯವರಿಗೆ ಸೇರಿದ ಮನೆಗೆ ಮಧ್ಯಾಹ್ಮ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿಗೆ 95 ಸಾವಿರ ಹಣ, ಬಟ್ಟೆ, 30 ಗ್ರಾಂ ತೂಕದ ಬಂಗಾರ, ಅಡಿಕೆ ಸೇರಿದಂತೆ ಒಟ್ಟು ರೂ. 4.5 ಲಕ್ಷ ನಷ್ಟ ಉಂಟಾಗಿದೆ.

ಮನೆಯವರು ಹತ್ತಿರದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮನೆ ಯಿಂದ ಹೊಗೆ ಹೊರಗೆ ಹೋಗುತ್ತಿದ್ದುದನ್ನು ಗಮನಿಸಿದ ಮಹಿಳೆ ಮನೆಯ ಬಳಿ ಓಡೋಡಿ ಬಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶಾಲಾಕ್ಷಿ ಎಂಬುವವರು 5 ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಮೂವರು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಕಷ್ಟಪಟ್ಟು ಬದುಕುತ್ತಿದ್ದ ಅವರಿಗೆ ಈ ದುರಂತ ಅಸಹಾಯಕನ್ನಾಗಿ ಮಾಡಿದೆ.

ಸ್ಥಳಕ್ಕೆ ಗ್ರಾಪಂ ಸದಸ್ಯರಾದ ಅರುಣ ಬೈಸೆ, ಕೆ.ಬಿ.ಕುಮಾರ್, ಕರುಣಾಕರ ಶೆಟ್ಟಿ, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close