ಸುದ್ದಿಲೈವ್/ಶಿವಮೊಗ್ಗ
ಬಂಜಾರ ಸಂಘಕ್ಕೆ ತಹಶೀಲ್ದಾರ್ ರನ್ನ ಆಡಳಿತಾಧಿಕಾರಿಯಾಗಿ ನೇಮಿಸಿರುವುದನ್ನ ಬಂಜಾರ ಸಂಘ ಸ್ವಾಗತಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕೆ.ಶಶಿಕುಮಾರ್ ಮತ್ತು ರೇಣು ನಾಯ್ಕ್, 100×200 ಅಡಿ ಸುತ್ತಳೆತೆಯಲ್ಲಿ ವಿದ್ಯಾರ್ಥಿ ನಿಲಯವನ್ನ ನಿರ್ಮಿಸಲಾಗಿತ್ತು. ಸಂಘದ ಜಾಗವನ್ನ ನೀಡಿರುವುದೇ ಶೈಕ್ಷಣಿಕ ಉದ್ದೇಶದಿಂದಾಗಿ ಆದರೆ ಮಾಜಿ ಶಾಸಕರಾದ ಅಶೋಕ್ ನಾಯ್ಕ್ ಬೈಲಾ ಉಲ್ಲಂಘಿಸಿ ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.
ಕಾರ್ಯಕಾರಿ ಮಂಡಳಿಯನ್ನ ರಚಿಸಬೇಕಿತ್ತು ಮಾಡದೆ ಲಾಭದಾಯದ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಿದರು. ತಾಂಡಾ ಅಭಿವೃದ್ಧಿ ನಿಗಮದಿಂದ ಮತ್ತು ನೀರಾವರಿ ನಿಗಮದಿಂದ ಹಣ ಬಿಡುಗಡೆಯಾಗಿದೆ. ಸಂಸದರ ಶ್ರಮದಿಂದ ನಿರ್ಮಿತಿ ಕೇಂದ್ರದಿಂದ ಕಟ್ಟಡ ನೀರ್ಮಿಸಿಕೊಡಲಾಗಿದೆ.
ಆದರೆ ಅಶೋಕ್ ನಾಯ್ಕ್ ಕಟ್ಟಡವನ್ನ ದುರುಪಯೋಗ ಪಡಿಸಿಕೊಙಡಿದ್ದೀರಿ. ಸುನೀಲ್ ಹೆಗ್ಡೆಗೆ ಮೂರು ಮುಕ್ಕಾಲು ಕೋಟಿ ಕೊಟ್ಟಿರುವುದೇಕೆ? ಸುನೀಲ್ ಹೆಗ್ಡೆ ಯಾರು? ನಿಮ್ಮ ಚೇಲನಾ? ಎಂದು ಪ್ರಶ್ನಿಸಿದ ಅವರು ಭವನದಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
13/72024 ರಂದು ಜನರಲ್ ಬಾಡಿ ಸಭೆ ನಡೆಸಿ ಚುನಾವಣೆ ನಡೆಸಲಾಗಿದೆ. 16 ಕೋಟಿ ಹಣ ಕರ್ಚು ಮಾಡಿ ಕಟ್ಟಡ ನಿರ್ಮಿಸಿರುವ ಬಗ್ಗೆ ಲೆಕ್ಕ ಕೇಳಿದರೆ ವೈಟ್ ಶೀಟ್ ನಲ್ಲಿ ಬರೆದುಕೊಂಡು ಬಂದು ಲೆಕ್ಕ ಓದುತ್ತಾರೆ. 700 ಜನರು ಜನರೆಲ್ ಬಾಡಿ ಇದ್ದರೆ 35 ಜನರ ಸಭೆ ನಡೆಸುತ್ತಾರೆ ಎಂದು ದೂರಿದರು.
25 ಸಾವಿರ ರೂ. ಕ್ಲೀನಿಂಗ್ ಸರ್ವಿಸ್ ಎಂದು ಭವನದಲ್ಲಿ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ಕೆಕ್ಕ ತೋರಿಸುವುದಿಲ್ಲ. ಸಂಘವನ್ನ ಹುಟ್ಟು ಹಾಕಿದ ಸಮಾಜದ ನಾಯಕರ ಫೊಟೊಗಳಿಲ್ಲ. ಮಾಜಿ ಶಾಸಜರೇ ತಾವೇ ಸಮಾಜದ ಉದ್ದಾರಕರು ಎಂಬಂತೆ ಸಂಘದ ಅಡಿಗಲ್ಲಿನಲ್ಲಿ ಬಿಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರೇಣುನಾಯ್ಕ್, ಶಿವರಾಜ್ ನಾಯ್ಕ್, ಶೇಖರಾ ನಾಯ್ಕ್, ಹನುಮಮತ ನಾಯ್ಕ್, ಹರೀಶ್ ವೈ ಅಂಜನಾಪುರ ಉಪಸ್ಥಿತರಿದ್ದರು.