Girl in a jacket

ಜಾತ್ಯಾತೀತ ದೇಶವೆಂದ ಮೇಲೆ ಜಾತಿ ಜನಗಣತಿ ಯಾಕೆಬೇಕು?ಪೇಜಾವರ ಶ್ರೀಗಳು



ಸುದ್ದಿಲೈವ್/ಶಿವಮೊಗ್ಗ

ಉಡುಪಿಯಿಂದ ಹೊಸಪೇಟೆಗೆ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದ್ದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಮಾಜಿ ಡಿಸಿಎಂ ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದಾರೆ. 

ಈ ವೇಳೆ ಶ್ರೀಗಳನ್ನ ಮನೆಯೊಳಗೆ ಬರಮಾಡಿಕೊಂಡ  ಈಶ್ವರಪ್ಪ ಮತ್ತು ಅವರ ಕುಟುಂಬ ಆದರದ ಸ್ವಾಗತ ಮತ್ತು ಸತ್ಕಾರ್ಯವನ್ನ ನಡೆಸಿದ್ದಾರೆ.  ನಂತರ ಭಕ್ತರಿಗೆ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಿದೆ. 

ಮಾಧ್ಯಮಗಳಿಗೆ ಮಾತನಾಡಿದ ಪೆಜಾವರ ಶ್ರೀಗಳು ಚಾತುರ್ಮಾಸ ವೃತ ಪೂರೈಸಿ ಅಯೋದ್ಯೆ ಪ್ರವಾಸ ಮುಗಿಸಿದ್ದೇವೆ. ಅಯೋಧ್ಯದಲ್ಲಿ ರಾಮತಾರಕ ಯಜ್ಞವನ್ನ ನಡೆಸಿದ್ದೇವೆ. ದೇವಸ್ಥಾನದ ನಿರ್ಮಾಣದ ಬಾಕಿ ಉಳಿದ ಕಾರ್ಯ ಭರದಿಂದ ಸಾಗಿದೆ. ಮಂದಿರ ನಿರ್ಮಾಣದ ಬಳಿಕ ಏನು ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಪ್ರಶ್ನೆಗೆ ಉತ್ತರ ದೊರೆತಿದೆ. ಮಂದಿರದ ಬಳಿಕ ರಾಮರಾಜ್ಯದ ನಿರ್ಮಾಣವಾಗಬೇಕು ಎಂದು ಹೇಳಿದರು. 

ದೇಶದಲ್ಲಿ ರಾಮಮಂದಿರಕ್ಕೆ ಕೊರತೆ ಇಲ್ಲ. ರಾಮನ ಜನ್ಮ ಸ್ಥಾನ ಅಯೋಧ್ಯವಾಗಿರುವುದರಿಂದ ಅಯೋಧ್ಯೆಯಲ್ಲಿ ರಾಮನ ಮಂದಿರ ಬೇಕಿತ್ತು. ಈಗ  ರಾಮರಾಜ್ಯ ಸ್ಥಾಪಿತವಾಗಲಿದೆ. ಅಂದು ಅರಸರ ಕಾಲದಲ್ಲಿ ರಾಜ್ಯವನ್ನ  ರಾಮನ ಆಳಿ ರಾಮ ರಾಜ್ಯ ಹೇಗಿರಬೇಕೆಂದು ತೋರಿಸಿಕೊಟ್ಟಿದ್ದಾನೆ. ಹಾಗಾಗಿ ಈಗ ಪ್ರಜಾಪ್ರಭುತ್ವ ಇರುವುದರಿಂದ ಪ್ರಜೆಗಳೇ ರಾಮನಾದರೆ ರಾಮರಾಜ್ಯ ಸಾಧ್ಯವೆಂದರು. ಪ್ರಜೆಗಳೆ ರಾಮನೆಂದರೆ ಏನು ಎಂಬುದು ಪ್ರಶ್ನೆಯಾಗಿದೆ.  ರಾಮನ ಗುಣಲಕ್ಷಗಳನ್ನ ಜನರು ಮೈಗೂಡಿಸಿಕೊಂಡರೆ ಅದೇ ರಾಮರಾಜ್ಯಕ್ಕೆ ದಾರಿ ಎಂದರು. 

ಮಾತೃಭೂಮಿಗೆ ಗೌರವ ನೀಡುವುದೆ ದೇಶಭಕ್ತಿಯಾಗಿದೆ.  ರಾಮನಿಗೆ ಸೇವೆ ಸಲ್ಲಿಸಲು ಅಯೋಧ್ಯೆಗೆ ಬರಬೇಕೆಂಬುದಿಲ್ಲ. ಯಾರು ದುಖಿತರಿದ್ದಾರೆ. ಯಾರು ನೊಂದವರಿದ್ದಾರೆ ಅವರ ಸೇವೆ ಮಾಡಿ ಒಮ್ಮೆ ಅಯೋಧ್ಯೆಗೆ ಭೇಟಿ ನೀಡಿದರೆ ಸಾಕು ಎಂದರು.

ಶ್ರೀ ಮಠದಿಂದ ಮನೆ ಇಲ್ಲದವರಿಗೆ ಮನೆಕಟ್ಟಿಸಿಕೊಡಲಾಗುತ್ತಿದೆ. ದೇಶ ಸೇವೆಯೇ ರಾಮನ ಸೇವೆಯಾಗಿದೆ. ಚಾತುರ್ಮಾಸಕ್ಕೆ ಹೋಗುವ ಮೊದಲು ಹಲವೆಡೆ ಮನೆಗಳ ಭೂಮಿ ಪೂಜೆ ನಡೆಸಲಾಗಿತ್ತು.  ಸಮಾಜದಲ್ಲಿ ಎಲ್ರೂ ಸೇರಿ ಬದುಕಿನ ವಿಶಿಷ್ಟ ಕ್ಷಣಗಳನ್ನ ಆನಂದಿಸಬೇಕಿದೆ. 8-10 ಲಕ್ಷ ಖರ್ಚು ಮಾಡಲು ಸಮರ್ಥರಿದ್ದರೆ ಅವರು ಈ ಸೇವೆಗೆ ಮುಂದಾಗಬಹುದು ಎಂದರು. 


ನಮ್ಮ ನಮ್ಮ ವೃತ್ತಿಯ ಮೂಲಕ ಜನ ಸೇವೆಯನ್ನ ಮಾಡಬಹುದಿದೆ, ಬಿಲ್ಡರ್, ವೈದ್ಯ ಇಂಜಿನಿಯರ್ ಸೇರಿದಂತೆ ಕೂಲಿಯವನೂ ಸಹ ಈ ಸೇವೆಯನ್ನ ಕೈಗೊಳ್ಳಬಹುದು. ಶಿವಮೊಗ್ಗದಲ್ಲೂ ಈ ಸೇವೆ ದೊರೆಯುವಂತಾಗಲಿ ಎಂದು ಆಶಿಸಿದರು. 

ಮಥುರ ಮತ್ತು ಕಾಶಿಯಲ್ಲಿ ಮಂದಿರ ನಿರ್ಮಾಣದ ಕೂಗು ಹೆಚ್ಚಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ಅಲ್ಲಿ ತಪ್ಪಾಗಿದ್ದರೆ ಸರಿಪಡಿಸುವ ಕೆಲಸ ಆಗಲಿ ಎಂದರು. ಜಾತಿ ಜನಗಣತಿ ವಿಚಾರದಲ್ಲಿ ಕರ್ಚು ಮಾಡಿ ಜನಗಣತಿಯನ್ನ ಆಗಾಗ್ಗೆ ನಡೆಸಿ ಸರ್ಕಾರ ಅದನ್ನ ಬಜಿರಂಗ ಪಡಿಸುತ್ತಿಲ್ಲ. ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಎಂಬುದನ್ನ ಶ್ರೀಗಳು ಪ್ರಶ್ನಿಸಿದರು.

ಜಾತಿ ಆಧಾರದಲ್ಲಿ ಸವಲತ್ತು ನಡೆಯಬೇಕಾ? ಒಂದು ಕಡೆ ಜಾತಿ ಬೇಡ ಎಂದು ಹೇಳುವ ಸರ್ಕಾರ ಮತ್ತೆ ಜಾತಿಗಣತಿ ನಡೆಸುವುದು ಯಾಕೆ ಎಂದು ಪ್ರಶ್ನಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close