Girl in a jacket

ಪಾಲಿಕೆ ಅಧಿಕಾರಿಗಳ ವಿರುದ್ಧ ಮುಗಿಬಿದ್ದ ಮತ್ತೊಂದು ಸಂಘಟನೆ


ಸುದ್ದಿಲೈವ್/ಶಿವಮೊಗ್ಗ

ಮಳೆಯ ಅವಾಂತರಕ್ಕೆ ಸಂಘ ಸಂಸ್ಥೆಗಳು ಸ್ಥಳೀಯ ಆಡಳಿತದ ಮೇಲೆ ಮುಗಿಬಿದ್ದಿವೆ. ಇಂದು ಪಾಲಿಕೆ ಆಯುಕ್ತರು ಅನಾಹುತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ. ಈಗಾಗಲೇ ಎಸ್ ಡಿ ಪಿಐ ಪಾಲಿಕೆಯ ನಿರ್ಲಕ್ಷತನದಿಂದ ಅವಾಂತರ ಸೃಷ್ಠಿಯಾಗಿದೆ ಎಂದು ಕೆಂಡಕಾರಿದೆ. ಅದರ ಬೆನ್ನಲ್ಲೇ ಕರವೇ ಸ್ವಾಭಿಮಾನಿ ಬಳಗ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 

ಶಿವಮೊಗ್ಗ ನಗರದಲ್ಲಿ ಪದೇ ಪದೇ ಯಥೇಚ್ಛವಾಗಿ ಬರುತ್ತಿರುವ ಮಳೆಗೆ ಜನರು ತೊಂದರೆಗೆಡಾಗುತ್ತಿದ್ದಾರೆ. ಇದನ್ನು ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಜನರಿಗೆ ಹೆಚ್ಚಿನ ರೀತಿಯಲ್ಲಿ ತೊಂದರೆ ಮತ್ತು ಆರ್ಥಿಕ ಪರಿಸ್ಥಿತಿ ಹಾಳಾಗಲು ಕಾರಣವಾಗಿದೆ. 

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಜಲಮಂಡಳಿಯ ಅಧಿಕಾರಿಗಳ ನಿರ್ಲಕ್ಷತನದಿಂದ ನಗರದ ಜನ ಕಲೂಷಿತ ನೀರು ಕುಡಿಯುವಂತಾದರೆ. ಇಂದು ಬಿದ್ದ ಮಳೆಯಿಂದಾಗಿ ಜನ ಪರದಾಡುವಂತಾಗಿದೆ. 

ಎರಡೂ ಇಲಾಖೆಗಳು  ನಿಷ್ಪ್ರಿಯವಾಗಿರುವುದು ಎದ್ದು ಕಾಣುತ್ತಿದೆ.  ಸರ್ಕಾರದ ಮಟ್ಟದಲ್ಲಿ ಇವರನ್ನ ಬದಲಾವಣೆ ಅಥವಾ ಅಮಾನತ್ತು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಮಧುಸೂದನ್ ರವರು ಆಗ್ರಹಿಸಿದ್ದಾರೆ.‌ 

ಮತ್ತೆ ಮುಂದಿನ ದಿನದಲ್ಲಿ ಹೀಗೆ ಮುಂದುವರೆದರೆ ಎಲ್ಲಾ ನಿವಾಸಿಗಳನ್ನು ಒಗ್ಗೂಡಿಸಿ ನಿಷ್ಕ್ರಿಯ ಅಧಿಕಾರಿಗಳ ಅಮಾನತ್ತಿಗೆ ಪಟ್ಟು ಹಿಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. 

ಬಡಾವಣೆಗಳ ಮನೆಗಳಿಗೆ ಇಂದು ಸಂಘಟನೆಯ ಜಿಲ್ಲಾಧ್ಯಕ್ಷ ಮಧುಸೂದನ್ ರವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ರವಿಪ್ರಸಾದ್ ,ಜಿಲ್ಲಾ ಕಾರ್ಯಾಧ್ಯಕ್ಷ ರಘುನಂದನ್, ನೂರುಲ್ಲಾ ಭೇಟಿಯನ್ನು ನೀಡಿದ್ದು ಜನರ ಅಹವಾಲನ್ನು ಸ್ವೀಕರಿಸಿದ್ದು ಇದನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close