ಎಲ್ ಬಿಎಸ್ ನಗರ ನಿವಾಸಿಗಳಿಗೆ ನಿದ್ರೆ ಕೆಡಿಸಿದ ಮಳೆ

 


ಸುದ್ದಿಲೈವ್/ಶಿವಮೊಗ್ಗ

ರಾತ್ರಿ ಸುರಿದ ಮಳೆ ವಿಶ್ರಾಂತಿ ನೀಡಿದರು ಶಿವಮೊಗ್ಗ ಜನರಿಗೆ ಹೆಚ್ಚಿನ ಕೆಲಸಕೊಟ್ಟಿದೆ. ಎಲ್ ಬಿಎಸ್,  ಆರ್ ಎಂ ಎಲ್ ನಗರ, ಮಲವಗೊಪ್ಪ ಹಾಗೂ ಇತರೆ ಬಡಾವಣೆಗಳಲ್ಲಿ ಮಳೆಯ ಅವಾಂತರ ಮುಂದುವರೆದಿದೆ.

ರಾತ್ರಿಯ ಈ ಮಳೆ ನಿವಾಸಿಗಳ ನಿದ್ದೆ ಕೆಡೆಸಿವೆ. ಎಲ್ ಬಿಎಸ್ ನಗರದ ಮೊದಲನೇ ತಿರುವಿನಲ್ಲಿ ಮಳೆ ಹಾನಿ ಹೆಚ್ಚಿಗೆ ಉಂಟಾಗಿದೆ. ಬಸವರಾಜ್, ಸಕಮ್ಮ ನಟರಾಜ್ ಮತ್ತು ಕಾವ್ಯಶ್ರೀ ಅವರ ಮನೆಯ ವಾಷಿಂಗ್ ಫ್ರಿಡ್ಜ್ ಮತ್ತು ಇತರೆ ಎಲೆಕ್ಟ್ರಾನಿಕ್ ಗೂಡ್ಸ್ ಗಳು ಹಾನಿಯಾಗಿವೆ. ನಿವಾಸಿಗಳು ಬೆಳಿಗ್ಗೆ ನೀರು ಎಳೆಯುವ ಪ್ಯಾಡ್ ನ್ನ ಕೊಂಡುಕೊಂಡು ಹಿಡಿದುಕೊಂಡು ಹೋಗುತ್ತಿರುವ ದೃಶಗಯಗಳು ಲಭ್ಯವಾಗಿವೆ.

ಮನೆಗಳಲ್ಲಿ ಈಗಲೂ ಮಳೆ ನೀರು ನುಗ್ಗಿರುವ ದೃಶ್ಯ ಲಭ್ಯವಾಗಿದೆ. ಎರಡು ಮನೆಗಳು ಜಲಾವೃತಗೊಂಡಿದೆ. ಹಾಪ್ ಕಾಮ್ ನಲ್ಲಿ ನೀರು ನುಗ್ಗಿದೆ. ನಿವಾಸಿಗಳಿಗೆ ಇವತ್ತು ದಿನವಿಡಿ ಸ್ವಚ್ಛಗೊಳಿಸುವುದೇ ಕೆಲವಾಗಲಿದೆ.

2019 ರಲ್ಲಿ  ಉಂಟಾದ  ನೆರೆ ಈಗ ಎರಡು ದಿನಗಳ ಮಳೆಯಲ್ಲಿ ಸಂಭವಿಸಿದೆ. ಪಕ್ಕದಲ್ಲಿರುವ ಹರಿಯುವ ರಾಜಾಕಾಲುವೆಯೂ ಮಳೆಯಿಂದಾಗಿ ಅಪಾಯಮಟ್ಟವನ್ನ ದಾಟಿ ಹರಿದಿದೆ. 2022 ರಲ್ಲಿ ರಾಜಾಕಾಲುವೆಯನ್ನ ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಈ ಅವಾಂತರ ಸೃಷ್ಠಿಯಾಗಿದೆ ಎಂಬುದು ನಿವಾಸಿಗಳ ಆರೋಪವಾಗಿದೆ.



17 ಕೋಟಿ ಹಣದಲ್ಲಿ ನಿರ್ಮಾಣವಾಗಿರುವ ಈ ರಾಜಾ ಕಾಲುವೆಗೆ ಹೈಟ್ ಮಾಡದೆ ವಾಲ್ ಗಳ ಸಮಸ್ಯೆಯಿಂದ ಉಕ್ಕಿಹರಿಉತ್ತಿದೆ. ಮಳೆ ನಿಂತು ನಾಲ್ಕೈದು ಗಂಟೆಗಳಾಗಿವೆ. ಆದರೂ ರಾಜಾಕಾಲುವೆ ಅಪಾಯಮಟ್ಟದಲ್ಲಿ ಹರಿಯುತ್ತಿದ್ದುಮನೆಗಳ ಮುಂದಿನ ಮೋರಿಗಳಲ್ಲಿ ನೀರುಗಳು ಬ್ಲಾಕ್ ಆಗಿ ಮನೆಗಳಿಗೆ ನೀರು ನುಗ್ಗಿದೆ ಎಂಬುದು ಸ್ಥಳೀಯರ ದೂರಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close