![]() |
ಆಲ್ಕೊಳದ ಎಸ್ ಹೆಚ್ ಲೇಔಟ್ |
ಸುದ್ದಿಲೈವ್/ಶಿವಮೊಗ್ಗ
ಬೆಳ್ಳಂಬೆಳಿಗ್ಗೆ ಹಿಡಿದುಕೊಂಡ ಗುಡುಗು ಸಹಿತ ಮಳೆ ಶಿವಮೊಗ್ಗ ಜನತೆನ್ನ ಬಿಟ್ಟು ಬಿಡದಂತೆ ಕಾಡಲಾರಂಭಿಸಿದೆ. ಗುಡುಗು ಮತ್ತು ಮಿಂಚುಗಳ ಸಹಿತ ಮಳೆಯಿಂದಾಗಿ ನಗರದ ವಾಸಿಗಳು ಹೈರಾಣಾಗಿದ್ದಾರೆ.
ಅ.22 ರ ವರೆಗೆ ಮಳೆ ಎಚ್ಚರಿಕೆ ಇದ್ದರೂ ಇಂದು ಬೆಳಿಗ್ಗೆಯಿಂದಲೇ ಮಳೆ ಸುರಿಯಲು ಆರಂಭಿಸಿದೆ. ಈ ಮಳೆ ಬೆಳಿಗ್ಗೆ ಸುಮಾರು 5-30 ರಿಂದ ಪ್ರಾರಂಭವಾಗಿ ನಿಧಾನವಾಗಿ ಹೆಚ್ಚಲಾರಂಭಿಸಿದೆ.
7-34 ರ ವೇಳೆಯಲ್ಲಿ ಗುಡುಗಿನ ಶಬ್ದ ಕೆಲ ಸೆಕೆಂಡುಗಳವರೆಗೆ ನಿರಂತರವಾಗಿ ಕೇಳಿಸಿದ್ದು ಆತಂಕ ಮೂಡಿಸಿದೆ. ಎರಡು ದಿನಗಳವರೆಗಿನ ಮಳೆ ನಿರಂತರವಾಗಿ ಸುರಿದಿರಲಿಲ್ಲ. ಅಲ್ಲಲ್ಲಿ ಸಣ್ಣ್ರಮಣದಲ್ಲಿ ಮಳೆಯಾಗುತ್ತಿತ್ತು. ಇಂದು ಮಳೆ ಕಳೆದ ಎರಡು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿದೆ.
ಮಳೆ ಅನಾಹುತ
ಸಧ್ಯಕ್ಕೆ ಮಳೆ ಹೆಚ್ಚಾದ ಪರಿಣಾಮ ಆಲ್ಕೊಳದಲ್ಲಿರುವ ಎಸ್ ಹೆಚ್ ಲೇಔಟ್ ನ ಕೆರೆ ನೀರು ಉಕ್ಕಿ ಲೇಔಟ್ ಗೆ ಹರಿದಿರುವ ದೃಶ್ಯ ಲಭ್ಯವಾಗಿದೆ. ಇದು ನಿರಂತವಾದರೆ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯೂ ಹೆಚ್ಚಿದೆ ಇಂದು ಯಲ್ಲೋ ಅಲರ್ಟ್ ಘೋಷಿಸಿದ್ದು ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.
ಅದರಂತೆ ಗೋಪಾಳದ ಸಿ ಬ್ಲಾಕ್ ನಲ್ಲಿ ಮನೆಯೊಳಗೆ ನೀರು ನುಗ್ಗಿದೆ. ಅದರಂತೆ ಕಾಶಿಪುರದ ತಮಿಳು ಕ್ಯಾಂಪ್ ನ ಚರಂಡಿ ನೀರು ಬ್ಲಾಕ್ ಆಗಿ ಮನೆಗಳಿಗೆ ನುಗ್ಗಿರುವ ದೃಶ್ಯ ಲಭ್ಯವಾಗಿದೆ.
ಲಕ್ಕಿನಕೊಪ್ಪ ಸರ್ಕಲ್ ಬಳಿಯಿರುವ ಹೊಸಕೆರೆ ಕೋಡಿ ತುಂಬಿ ರಸ್ತೆಗೆ ಹರಿದಿದೆ ಕೆಲ ಮನೆಗಳಿಗೂ ನೀರು ನುಗ್ಗಿದ ಮಾಹಿತಿಗಳು ಲಭ್ಯವಾಗಿದೆ. ಕೆಲಕಡೆ ಬಸ್ ಸಂಚಾರವೂ ಅಸ್ತವ್ಯಸ್ತಗೊಂಡು ಕೆಲಸಕ್ಕೆಹೋಗುವರಿಗೆ ತೊಂದರೆಯಾಗುರುವ ಮಾಹಿತಿ ಲಭ್ಯವಾಗಿದೆ.
ಆರ್ ಎಂ ಎಲ್ ನಗರದಲ್ಲೂ ಮಳೆಯ ಅನಾಹುತಗಳು ಕೇಳಿಬಂದಿವೆ. ರಸ್ತೆಯ ಮೇಲೆ ಮಳೆಯ ನೀರು ಹರಿದಿದ್ದು ತಗ್ಗಿನಲ್ಲಿರುವ ಮನೆಗಳಿಗೆ ನೀರು ನುಗ್ಗಿರುವ ದೃಶ್ಯಗಳು ಲಭ್ಯವಾಗಿದೆ.
ಎಲ್ಲೆಲ್ಲಿ ಮಳೆ?
ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳಲ್ಲಿ ಭಾರಿ ಮಳೆಯ ಅಲರ್ಟ್ ಇದೆ. ತೀರ್ಥಹಳ್ಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚಿಸಿದೆ.
ಭದ್ರಾವತಿಯ ಸಿಂಗನಮನೆ, ಹಿರಿಯೂರು, ಮಾವಿನಕೆರೆ, ಯರೆಹಳ್ಳಿ, ಅರಲಹಳ್ಳಿ, ಕಾಗೆಕೊಡಮಗ್ಗಿ, ತಡಸ, ಬಿಳಕಿಯಲ್ಲಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ನಾಗತಿಬೆಳಗಲು, ಅರೆಬಿಳಚಿ, ಕಲ್ಲಿಹಾಳ್, ದಾಸರಕಲ್ಲಹಳ್ಳಿ, ಎಮ್ಮೆಹಟ್ಟಿ, ಮೈದೊಳಲು, ಮಂಗೋಟೆ, ನಿಂಬೆಗೊಂದಿ, ಗುಡುಮಘಟ್ಟ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಹೊಸನಗರದ ಕೋಡೂರು, ಅಮೃತ, ಸೋನಲೆ, ಮೇಲಿನ ಬೆಸಿಗೆ ಸುತ್ತಮುತ್ತ ಜೋರು, ಮುಂಬಾರು, ಹೊಸೂರು (ಸಂಪೆಕಟ್ಟೆ), ಮಾರುತಿಪುರ ಭಾಗದಲ್ಲಿ ಸಾಧರಣ. ಶಿಕಾರಿಪುರದ ಚಿಕ್ಕಮಾಗಡಿ ಮತ್ತು ಇನಾಮ್ ಅಗ್ರಹಾರ ಮುಚಡಿ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ.ಶಿವಮೊಗ್ಗ ತಾಲೂಕಿನಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದೆ.