Girl in a jacket

ಕೋಟ್ಯಾಂತರ ರೂ. ಸಾಲ ಪಡೆದು ಬ್ಯಾಂಕ್ ಗೆ ವಂಚಿಸಿದ ಆರೋಪ-ದೂರು ದಾಖಲು



ಸುದ್ದಿಲೈವ್/ಶಿವಮೊಗ್ಗ

ಆಸ್ತಿ ಅಡಮಾನವಿಟ್ಟು ಬ್ಯಾಂಕ್ ನಿಂದ ಕೋಟ್ಯಾಂತರ ಸಾಲ ಪಡೆದ ವ್ಯಕ್ತಿ ಬ್ಯಾಂಕ್‌ಗೆ  ವಂಚಿಸಿ ಆಸ್ತಿಗಳನ್ನ ಮಾರಾಟ ಮಾಡಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ವೆಂಕಟೇಶ್ವರ ನಗರದ ನಿವಾಸಿ ಆರ್.ಬಿ.ರಾಜು ಎಂಬುವರು ಎಸ್.ಆರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ವೆಂಕಟೇಶ ನಗರದಲ್ಲಿರುವ 2450 ಚದರ ಅಡಿ ವಾಸದ ಮನೆ ಆಯನೂರಿನಲ್ಲಿರುವ 7 ಖಾಲಿ ನಿವೇಶನಗಳನ್ನ ಅಡವಿಟ್ಟು 2018 ರಲ್ಲಿ 1.25 ಕೋಟಿ ಸಾಲ ಪಡೆದಿದ್ದರು. 

ಸಾಲ ಮರುಪಾವತಿ ಮಾಡದ ರಾಜುಗೆ ಅನೇಕ ನೋಟೀಸ್ ನೀಡಿದರೂ ಉತ್ತರಿಸದೆ ಇರುವುದರಿಂದ ಇ-ಟೆಂಡರ್ ಮೂಲಕ ಹರಾಜಿಗೆ ಆಹ್ವಾನಿಸಲಾಗಿತ್ತು. ಇ-ಟೆಂಡರ್ ನಲ್ಲಿ ಖಲಂದರ್ ಎಂಬುವರು ಆಯ್ಕೆಯಾಗಿದ್ದರು. ಹಣವನ್ನ ಕಟ್ಟಿದ ಖಲಂದರ್‌ಗೆ ಆಸ್ತಿ ಮಾರಾಟ ಪ್ರಮಾಣ ಪತ್ರವನ್ನ ನೀಡಲಾಗಿತ್ತು. ಆಸ್ತಿ ಪ್ರಮಾಣ ಪತ್ರವನ್ನ ಖಲಂದರ್ ಅವರ ಹೆಸರಿಗೆ ಬದಲಾಯಿಸಿಕೊಡುವಂತೆ ಆಯನೂರು- ಕೋಹಳ್ಳಿಯ ಗ್ರಾಮಪಂಚಾಯಿತಿಯ ಪಿಡಿಒ ಪತ್ರ ವ್ಯವಹಾರ ಮಾಡಲಾಗಿತ್ತು. 

7 ಆಸ್ತಿಯಲ್ಲಿ 5 ಆಸ್ತಿಯನ್ನ ಬೇರೆಯವರಿಗೆ ರಾಜು ಮಾರಾಟ ಮಾಡಿರುವುದು ತಿಳಿದು ಬಂದಿದ್ದು ಈ ಆಸ್ತಿಯನ್ನ ಖಲಂದರ್ ಹೆಸರಿಗೆ ಮಾರಾಟ ಮಾಡಲು ಬರುವುದಿಲ್ಲ ಎಂದು ಪಿಡಿಒ ತಿಳಿಸಿದ್ದರಿಂದ ರಾಜು ಆಯನೂರಿನಲ್ಲಿರುವ ಐದು ಆಸ್ತಿಯನ್ನ ಬ್ಯಾಂಕ್ ಸಾಲವಿದ್ದರೂ ಮಾರಾಟ ಮಾಡಿರುವುದು ತಿಳಿದು ಬಂದಿದೆ. 

ಬ್ಯಾಂಕ್ ಸಾಲ ಮಾಡಿ, ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡದೆ ಇರುವ ರಾಜು ಅಡಮಾನವಿಟ್ಟು ಸಾಲ ಪಡೆದ ಆಸ್ತಿಯನ್ನೇ  ಬೇರೆಯವರಿಗೆ ಮಾರಾಟ ಮಾಡಿ ವಂಚಿರುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ದೊಟ್ಟಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close