Girl in a jacket

ಮಾಜಿ ಗೃಹ ಸಚಿವರ ಸಹೋದರಿ ನಿಧನ



ಸುದ್ದಿಲೈವ್/ತೀರ್ಥಹಳ್ಳಿ

ಮಾಜಿ ಗೃಹ ಸಚಿವ ಹಾಗೂ ಹಾಲಿ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರ ಸಹೋದರಿ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 70 ವರ್ಷ ವಯಸ್ಸಾಗಿತ್ತು.  

ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋದೂರು ನೀಲಮ್ಮ ಶಂಕರಪ್ಪ (70) ಅಲ್ಪಕಾಲದ ಅನಾರೋಗ್ಯದಿಂದ ಜೆಸಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಮೃತರು ಪತಿ, ಇಬ್ಬರು ಗಂಡು, ಓರ್ವ ಹೆಣ್ಣು ಮಗಳು ಹಾಗೂ ಸಹೋದರ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕೋದೂರು ಗ್ರಾಮದಲ್ಲಿ ಸಂಜೆ ನಡೆಯಲಿದೆ. 

ರಾಮಣ್ಣ ಗೌಡ ಮತ್ತು ಚಿನ್ನಮ್ಮ ದಂಪತಿಗಳ 5 ಗಂಡು 5 ಹೆಣ್ಣು ಮಕ್ಕಳ ಪೈಕಿ ಶಾಸಕ ಆರಗ ಜ್ಞಾನೇಂದ್ರ ಮೊದಲನೆಯ ಪುತ್ರರಾಗಿದ್ದು ನೀಲಮ್ಮ ಎರಡನೆಯ ಪುತ್ರಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು