Girl in a jacket

ಬೈಕ್ ಕಳುವಿನ ಆರೋಪಿ ಪತ್ತೆ



ಸುದ್ದಿಲೈವ್/ರಿಪ್ಪನ್ ಪೇಟೆ

ರಿಪ್ಪನ್ ಪೇಟೆಯ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬರುವ 9 ನೇ ಮೈಲುಗಲ್ಲಿನ ಬಳಿ ನಿಲ್ಲಿಸಿದ್ದ ಬಜಾಜ್ ಸಿಟಿ 100 ದ್ವಿಚಕ್ರವಾಹನ ಕಳ್ಳತನದ ಆರೋಪಿಯನ್ನ ರಿಪ್ಪನ್ ಪೇಟೆ ಪೊಲೀಸರು ಪತ್ತೆಹಚ್ಚಿ, ಆರೋಪಿಗಳನ್ನ ಬಂಧಿಸಲಾಗಿದೆ. 

ಅ.15  ರಂದು ಹೊಸನಗರ ತಾಲೂಕಿನ ಹಾರೋಹಿತ್ತಲ ಗ್ರಾಮದವರಾದ  ಸುಧಾಕರ್ ಎಂಬುವರು ತಮ್ಮ BAJAJ CT 100 ದ್ವಿಚಕ್ರ ವಾಹನವನ್ನು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ  9ನೇ ಮೈಲುಗಲ್ಲಿನ ಹತ್ತಿರ ವಾಹನ ನಿಲ್ಲಿಸಿದ್ದು ಕಳವು ಮಾಡಲಾಗಿತ್ತು. ಪ್ರಕರಣವನ್ನ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.‌

ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಮತ್ತು ಆರೋಪಿತರ ಪತ್ತೆಗಾಗಿ  ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು  ಕಾರಿಯಪ್ಪ ಎ.ಜಿ,  ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ,  ಮತ್ತು ಹೊಸನಗರ ಸಿಪಿಐ  ಗುರಣ್ಣ ಹೆಬ್ಬಾರ್  ಮೇಲ್ವಿಚಾರಣೆಯಲ್ಲಿ,   ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ  ಸಿ.ಹೆಚ್.ಸಿ ಚನ್ನಪ್ಪ ಮತ್ತು ಸಿಪಿಸಿ ಸಂತೋಷ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 

ತನಿಖಾ ತಂಡವು ಅ.17 ರಂದು ಆರೋಪಿತರಾದ  1) ಸಾದಿಕ್ ವುಲ್ಲಾ @ ಚಮಟಿ, 21 ವರ್ಷ, ಅಣ್ಣಾ ನಗರ ಶಿವಮೊಗ್ಗ  ಮತ್ತು 2) ವಿವೇಕ್ @ ಸಿದ್ದು 23 ವರ್ಷ  ಅಣ್ಣ ನಗರ ಶಿವಮೊಗ್ಗ, ಇವರನ್ನು ಬಂಧಿಸಲಾಗಿದೆ. ಆರೋಪಿತರಿಂದ ಅಂದಾಜು ಮೌಲ್ಯ 25,000/- ರೂಗಳ BAJAJ CT-100 ದ್ವಿಚಕ್ರವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close