ಆಗುಂಬೆಯಲ್ಲಿ ಸಾಲುಗಟ್ಟಿ ನಿಂತ ವಾಹನಗಳು


ಸುದ್ದಿಲೈವ್/ತೀರ್ಥಹಳ್ಳಿ 

ದಸರಾ ಹಬ್ಬ, ಸಾಲುಗಟ್ಟಿದ ರಜೆಗಳ ಹಿನ್ನಲೆಯಲ್ಲಿ ಆಗುಂಬೆ ಘಾಟಿಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಗಂಟೆಗಟ್ಟಲೆ ನಿಂತು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ.  

ಟ್ರಾಫಿಕ್ ಬಿಸಿಯಿಂದಾಗಿ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಹಬ್ಬ ಮುಗಿಸಿ ಊರುಗಳಿಗೆ ಹೊರಟ ವಾಹನ ಸಂಚಾರರಿಗೆ ಟ್ರಾಫಿಕ್ ಬಿಸಿ ತಟ್ಟಿದೆ‌.     

ಘಾಟಿಯಲ್ಲಿ ವಾಹನಗಳ ಸಂಚಾರದಿಂದಾಗಿ  ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಮಂಗಳೂರು, ಉಡುಪಿಯಿಂದ ಚಿಕ್ಕಮಗಳೂರು ಹಾಗೂ ತೀರ್ಥಹಳ್ಳಿ,  ಶಿವಮೊಗ್ಗ ಮೂಲಕ ಬೆಂಗಳೂರಿಗೆ ಹೊರಟವರಿಗೆ ಆಗುಂಬೆ ಘಟಿಯಲ್ಲಿ ಟ್ರಾಫಿಕ್ ಜ್ಯಾಮ್ ಆಗಿದೆ.‌ ದಸರಾ ರಜೆ ಮುಗಿಸಿ ಹೊರಟ ವಾಹನ ಸವಾರರಿಗೆ ಕಳೆದ ಅರ್ಧ ಗಂಟೆಯಿಂದಲೂ ಹೆಚ್ಚು ಸಮಯ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.  


ನಿಂತಲ್ಲಿಯೇ ನಿಂತ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.ಸ್ಥಳದಲ್ಲಿ ಪೊಲೀಸರು ಇದ್ದರೂ ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲು ಹರ ಸಾಹಸ ಪಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close