ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮತ್ತು ಭದ್ರಾವತಿಯ ಹೈವೆ ರಸ್ತೆಯಲ್ಲಿ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಉಂಟಾಗಿದ್ದು ಅಪಘಾತದಲ್ಲಿ ಬೈಕ್ ನ ಇಬ್ಬರು ಸಾವಾಗಿರುವ ಘಟನೆ ನಿಧಿಗೆ ಬಳಿ ಸಂಭವಿಸಿದೆ.
ತಡರಾತ್ರಿ ಈ ಘಟನೆ ನಡೆದಿದೆ. ಭದ್ರಾವತಿ ಕಡೆ ಹೊರಟಿದ್ದ ಲಾರಿಗೆ ಭದ್ರಾವತಿಯಿಂದ ಶಿವಮೊಗ್ಗ ಕಡೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ಸವಾರು ರಾಂಗ್ ಸೈಡ್ ನಲ್ಲಿ ಬಂದ ಪರಿಣಾಮ ಈ ಅಪಘಾತ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ.
ಒಂದೇ ಬೈಕ್ ನಲ್ಲಿ ಓರ್ವ 17 ವರ್ಷದ ಬಾಲಕ, ಚೇತನ್ಯ(23) ಹಾಗೂ ತೇಜಸ್ವಿ(24) ಎಂಬ ಮೂವರು ಬೈಕ್ ನಲ್ಲಿ ಬರುವಾಗ ಈ ಘಟನೆ ಸಂಭವಿಸಿದೆ. ಇವರುಗಳು ಶಿವಮೊಗ್ಗದ ವಿದ್ಯಾನಗರದ ಹುಡುಗರು ಎಂದು ಹೇಳಲಾಗುತ್ತಿದೆ.
ಬೈಕ್ ಸಹ ಪುಡಿ ಪುಡಿಯಾಗಿದ್ದು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಗೊಂಡ ಯುವಕನನ್ನ ಮೆಗ್ಗಾನ್ ನಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.