ಸುದ್ದಿಲೈವ್/ಶಿವಮೊಗ್ಗ
ಜನ ದುಡ್ಡುಕೊಟ್ಟು ನೀರು ಕೊಂಡುಕೊಳ್ಳುವ ಪರಿಸ್ಥಿತಿಯನ್ನ ಅಧಿಕಾರಿಗಳು ನಿರ್ಮಿಸಿದ್ದಾರೆ. ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಇದರಲ್ಲಿ ಲಾಭಿ ಇರುವ ಅನುಮಾನವಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗದ ಆಸ್ಪತ್ರೆಗೆ ಹೋದರೂ ಕೂಡ, ಕುಡಿಯುವ ನೀರಿನ ಸಮಸ್ಯೆ ನಗರದಲ್ಲಿ ಕೊರೋನ ಪರಿಸ್ಥಿತಿ ನಿರ್ಮಾಣವಾಗಿಸಿದೆ. ಎಲ್ಲಾ ಆಸ್ಪತ್ರೆಗಳು ಹೌಸ್ ಫುಲ್ ಆಗಿವೆ. ಎಲ್ಲಾ ಲ್ಯಾಬ್ ಗಳಲ್ಲಿ ಜನ ಸರದಿಯಲ್ಲಿ ನಿಲ್ಲುವಂತಾಗಿದೆ. ಡೆಂಗ್ಯೂ ಕಾಲರ, ಜಾಂಡೀಸ್ ಮೊದಲಾದ ಕಾಯಿಲೆಗಳು ಹೆಚ್ಚಾಗಿದೆ. ಡಿಹೆಚ್ ಒಗೆ ಕೇಳಿದಾಗ ನೀರಿನಿಂದ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಡಿಹೆಚ್ ಒಗೆ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಹೇಳ್ತಾರೆ. ಅವರಿಗೆ ಕೇಳಿದರೆ ಮತ್ತೊಬ್ಬರಿಗೆ ಪತ್ರ ಬರೆದಿರುವುದಾಗಿ ಜವಬ್ದಾರಿಯನ್ನ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಅಕಾಲಿಕ ಮಳೆಯಾಗಿಲ್ವಾ? ಇದೇ ಮೊದಲ ಬಾರಿಗೆ ಅಕಾಲಿಕ ಮಳೆಯಾಗುತ್ತಿದೆಯಾ? ಗಂಗಾ ಸ್ನಾನ ತುಂಗ ಪಾನ ಎಂಬ ನಾಣ್ನುಡಿಯನ್ನೇ ಅಧಿಕಾರಿಗಳು ಹಾಳುಮಾಡಿಟ್ಟಿದ್ದಾರೆ. ಪಂಪ್ ಹೌಸ್ ಗೆ ಕೂಡ ಹೋಗಿದ್ದಾಗ ಅಧಿಕಾರಿಗಳು ಕ್ರಮ ಜರುಗಿಸಿರುವುದಾಗಿ ಹೇಳ್ತಾರೆ. ಮೈಕ್ರೋ ಬಯೋಲಾಜಿ ಲ್ಯಾಬ್ ಮೆಗ್ಗಾನ್ ನಲ್ಲಿದೆ. ಅಲ್ಲಿಗೆ ಸ್ಯಾಂಪಲ್ ಕಳುಹಿಸಿದ್ದೀರಾ ಎಂದರೆ ಇಲ್ಲ ನಮ್ಮಲ್ಲೇ ವರದಿ ಸಿಗುತ್ತೆ ಅಂತಾರೆ. ಒಟಗಟಿನಲ್ಲಿ ಅಧಿಕಾರಿಗಳು ಆಟಾಡುತ್ತಿದ್ದಾರೆ ಎಂದು ದೂರಿದರು.
ಅಧಿಕಾರಿಗಳು ಮೂಲ ಭೂತ ಸೌಕರ್ಯಗಳನ್ನೇ ಹಾಳು ಮಾಡಿದ್ದಾರೆ. ಇದನ್ನ ನಿಯಂತ್ರಿಸಲು ಇವರಿಗೆ ಆಗಿರುವ ಸಮಸ್ಯೆಗಳೇನು? 8 ವರ್ಷ ಕಳೆದರೂ 24×7 ನೀರು ಸರಬರಾಜು ಆಗ್ತಾ ಇಲ್ಲ. 8 ವರ್ಷದ ಹಿಂದೆ ಸಂಪೇ ಬೇಡ, ಕ್ರಿಸ್ಟಲ್ ಕ್ಲಿಯರ್ ನೀರು ಕೊಡ್ತಿವಿ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಇಲ್ಲಿಯವರೆಗೂ 50% ನೀರು ಸರಬರಾಜಾಗುತ್ತಿಲ್ಲ. ಕೆಲಸ ಮಾಡುವ ಕೊರತೆ ಎದ್ದುಕಾಣ್ತಾ ಇದೆ. ಇದಕ್ಕೆ ಕಾರಣ ಏನು? ಪಾಲಿಕೆ ಮತ್ತು ವಾಟರ್ ಬೋರ್ಡ್ ನ ಪ್ರತಿಯೊಬ್ಬರ ಬಳಿ ಕಾರಿದೆ. ಅರೋಗ್ಯದ ಬಗ್ಗೆ ಆಟಾಡಬೇಡಿ ಎಂದು ಎಚ್ಚರಿಸಿದರು.
ಇದೇ ಮುಂದೆ ವರೆದರೆ ಜನ ರೊಚ್ಚಿಗೆ ಏಳುತ್ತಾರೆ. ಪ್ರತಿಯೊಬ್ಬ ಮನೆಯಲ್ಲೂ ಹಿಮೋಗೋಬ್ಲಿನ್, ಡೆಂಗ್ಯೂ ಮೊದಲಾದ ನಾಲ್ಕು ಖಾಯಿಲೆಗಳು ಮಾಮೂಲಾಗಿ ಕಾಣ್ತಾಇದೆ. ಮಿನಿ ವಾಟರ್ ಸ್ಕೀಮ್ ಗಳಿಗೆ ಜನಮೊರೆಹೋಗಿ ಕ್ಯಾನ್ ಗಳಲ್ಲಿ ನೀರು ಹಿಡಿದುಕೊಂಡು ಹೋಗುತ್ತಿದ್ದಾರೆ. ನೀರಿನ ಪರೀಕ್ಷೆಯನ್ನು ವಾಟರ್ ಬೋರ್ಡ್ನವರು ಅವರಲ್ಲೇ ಮಾಡಿಕೊಳ್ಳುವುದಾದರೆ, ಬೇರೆಯವರು ಸರಿ ಇದೆ ಎಂದು ಹೇಳಬೇಕಲ್ವಾ? ಎಂದು ಅಧಿಕಾರಿಗಳನ್ನ ಜಾಡಿಸಿದರು.
ಅಧಿಕಾರಿಗಳು ಈ ಪರಿಸ್ಥಿತಿಯಲ್ಲಿ ಜವಬ್ದಾರಿಯಿಂದ ಮೆರೆಯಬೇಕು. ಕುದಿಸಿ ಆರಿಸಿ ನೀರು ಕುಡಿಯಲು ಹೇಳಲು ವಾಟರ್ ಬೋರ್ಡ್ ಬೇಕಾ? ನೀವು ಹೇಳಿದಂತೆ ಮಾಡುತ್ತೇವೆ ಆದರೆ ನಿಮ್ಮ ಜವಬ್ದಾರಿಯೇನು? ಕಾಯಿಸಿ ಆರಿಸಿ ಕುಡಿಯಲು ಜನರು ನಂಬಿಕೆ ಕಳೆದುಕೊಂಡು ಕ್ಯಾನ್ ಹಿಡಿದುಕೊಂಡು ಹೋಗುತ್ತಿದ್ದಾರೆ ಏಂದು ಆಗ್ರಹಿಸಿದರು.
ಆಯುಧ ಪೂಜೆ ನಡೆದ ವೇಳೆ ಮಿಷಿನ್ ಗೆ ಬಲೂನ್ ಕಟ್ಟಲಾಗಿದೆ. ದಸರಾ ಆಚರಿಸಿದ್ದಾರೆ. ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ನೀರು ಪರಿಶೀಲನೆ ಮತ್ತು ನಿರ್ವಹಣೆ ಆಗಬೇಕು. ಕಾನೆಹಳ್ಳದ ಬಳಿ ಕಪ್ಪು ನೀರು ಮಿಶ್ರಿತವಾಗುತ್ತಿದೆ ಎಂದು ಶಾಸಕರು ಹೇಳಿದ್ದಾರೆ. ಇದು ಮೊದಲು ಬಾರಿಗೆ ನಡೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜವಬ್ದಾರಿ ಮೆರೆಯಬೇಕು ಎಲ್ಲಿ ಕಾಣ್ತಾನೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಈ ವಿಚಾರದಲ್ಲಿ ಪಾಲಿಕೆ ಕೈತೊಳೆದುಕೊಂಡಿದ್ದಾರೆ ಅವರದ್ದೇ ಜವಬ್ದಾರಿ ಇದು. ವಾಟರ್ ಬೋರ್ಡ್ ನಿರ್ವಹಣೆಯಾಗಿದೆ. ಪಾಲಿಕೆ, ಡಿಸಿ, ಡಿಹೆಚ್ ಒ ಜಿಲ್ಲಾ ಉಸ್ತುವಾರಿ ಸಚಿವರು ಜವಬ್ದಾರಿ ಮೆರೆಯಬೇಕು. ಪಾಲಿಕೆಯ ಕರ್ಮಕಾಂಡದ ಬಗ್ಗೆ ಮತ್ತೊಮ್ಮೆ ಮಾತನಾಡುವೆ. ಇದು ಹೀಗೆ ನಡೆದರೆ ವಾಟರ್ ಬೋರ್ಡ್ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.