ಸುದ್ದಿಲೈವ್/ತೀರ್ಥಹಳ್ಳಿ
ಹಲವಾರು ಅಪರಾಧಗಳಲ್ಲಿ ಭಾಗಿಯಾಗಿ ಹಾಗೆಯೇ ಬೆಂಗಳೂರಿನಲ್ಲಿ ಚಿನ್ನವನ್ನು ಕದ್ದು ತೀರ್ಥಹಳ್ಳಿ ಯಲ್ಲಿ ತಂದಿಟ್ಟಿದ್ದ ಆರೋಪಿಯನ್ನು ಮಾಗಡಿ ಪೊಲೀಸರು ತೀರ್ಥಹಳ್ಳಿಗೆ ಕರೆ ತಂದಿದ್ದ ಘಟನೆ ಶುಕ್ರವಾರ ನಡೆದಿದೆ.
ಹಮೀದ್ ಹಂಜ ಎಂಬ ಆರೋಪಿ ಬೆಂಗಳೂರಿನ ಮಾಗಡಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತಮ್ಮ ಮನೆಯಲ್ಲಿ ತಂದು ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1ಕೆಜಿಗೂ ಜಾಸ್ತಿ ಆಗುವಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಮೂಲತಃ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 70 ರಿಂದ 80 ಕ್ಕೂ ಹೆಚ್ಚು ಕೇಸ್ ಗಳಿದ್ದು ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾಗಿದ್ದ.
ಕೊಲೆ, ವಸೂಲಿ, ವಂಚನೆ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದು ಬಂದಿದೆ. ಹಲವಾರು ಕೇಸ್ ನಲ್ಲಿ ಭಾಗಿಯಾದ್ದ ಹಂಜ ಈಗ ಮಾಗಡಿ ಪೊಲೀಸ್ ಅತಿಥಿಯಾಗಿದ್ದಾನೆ.