ಸುದ್ದಿಲೈವ್/ಸಾಗರ
ಬಿಗ್ ಬಾಸ್ ಸೀಸನ್ 11 ಅ.3 ರಿಂದ ಆರಂಭವಾಗಿದೆ. ರಾತ್ರಿ 9-30 ಯಿಂದ 11 ಗಂಟೆಯ ವರೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರತಿದಿನ ಬಿತ್ತರವಾಗುತ್ತಿದೆ. ಆದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದಿಷ್ಟು ಅಡತಡೆಗಳು ಸಹ ಸರ್ವೆಸಾಮಾನ್ಯವಾಗಿದೆ.
ಸ್ವರ್ಗವಾಸಿಗಳು ಮತ್ತು ನರಕ ವಾಸಿಗಳ ಕಾನ್ಸೆಪ್ಟ್‌ಗೆ ಕೆಲ ಅಡತಡೆಯಾಗಿರುವುದಾಗಿ ಕೇಳಿ ಬಂದಿದೆ. ಈಗ ಮತ್ತೊಂದು ಸಂಕಷ್ಟ ಎದುರಾದಂತೆ ಕಂಡುಬರುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮ ಸಂಸಾರಿಕ ಮನೆಹಾಳು ಮಾಡುತ್ತಿದೆ. ಅದನ್ನು ತಡೆಕೋರಿ ಸಾಗರದ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸಾಗರದ ವಕೀಲ ಕೆ ಎಲ್ ಬೋಜರಾಜ್ ಇಂಜೆಕ್ಷನ್ ದಾವೆ ಸಲ್ಲಿಸಿದ್ದು ಸಾಗರದ ಹೆಚ್ಚವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಚಾಂದನಿ ರವರು ತುರ್ತು ನೋಟೀಸ್ ಜಾರಿಮಾಡಿ ಮುಂದಿನ ವಿಚಾರಣೆಯನ್ನು ದಿನಾಂಕ 28/10 ಕ್ಕೆ ನಿಗದಿಗೊಳಿಸಿದ್ದಾರೆ.