ಸುದ್ದಿಲೈವ್/ಶಿವಮೊಗ್ಗ
ಸಂಕಷ್ಟದಲ್ಲಿರು ರೈತರಿಗೆ ಶಾಕ್ ನೀಡಲು ಶಿಮೂಲ್ಮುಂದಾಗಿದೆ. ರೈತರಿಂದ ಖರೀದಿಸುವ ಹಾಲಿನ ದರವನ್ನ ಶಿಮೂಲ್ ಒಕ್ಕೂಟ ಇಳಿಸಿರುವುದು ರೈತರಿಗೆ ಬಿಗ್ ಶಾಕ್ ನೀಡಿದೆ.
ಪ್ರತಿ ಲೀಟರ್ ಹಾಲಿನ ಮೇಲೆ 90ಪೈಸೆ ಇಳಿಕೆ ಮಾಡಿ ಶಿಮೂಲ್ ನಿರ್ಧರಿಸಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ ವ್ಯಪ್ತಿಯ ರೈತರಿಗೆ ಶಿಮೂಲ್ ಬಿಗ್ ಶಾಕ್ ನೀಡಿದೆ.
ನಷ್ಟದ ನೆಪ ಹೇಳಿ ರೈತರಿಂದ ಖರೀದಿಸುವ ಹಾಲಿನ ದರ ಇಳಿಸಲಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಮಾಡಿ ದರ ಇಳಿಸಲಾಗಿದೆ. ಶಿಮುಲ್ 7 ಕೋಟಿ ರೂ. ನಷ್ಟದಲ್ಲಿದ್ದು ಅದರಿಂದ ಹೊರಬರಲು ಖರೀದಿ ದರ ಇಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ನಿನ್ನೆಯಿಂದಲೇ ಹಾಲಿನ ನೂತನ ದರ ಜಾರಿಯಾಗಿಧ. 33.03 ರೂ.ಗೆ ಹಾಲು ಉತ್ಪಾದಕರ ಸೊಸೈಟಿಗಳಿಂದ ಖರೀದಿ ಮಾಡುತಿದ್ದ ಶಿಮೂಲ್ ಇನ್ನುಮುಂದೆ 90 ಪೈಸೆ ಕಡಿಮೆದರದಲ್ಲಿ ರೈತರ ಹಾಲನ್ನ ಖರೀದಿಸಲಿದೆ.