ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ನಗರ ಉಪವಿಭಾಗ -2ರ ಘಟಕ 5 ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ನ.14 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಆರ್.ಎಂ.ಎಲ್.ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ.ರಸ್ತೆ, ಮರ‍್ನಮಿಬೈಲು, ಜೆ.ಸಿ.ನಗರ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಬಿ.ಹೆಚ್.ರಸ್ತೆ, ಪಿಯರ್‌ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲೆರೇವಣ್ಣನ ಕೇರಿ ಸುತ್ತ ಮುತ್ತ ವಿದ್ಯುತ್ ವ್ಯತ್ಯಯ
ಎಲೆರೇವಣ್ಣ ಕೇರಿ ರಸ್ತೆಯಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ನ.14 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣಕೇರಿ, ನಾಗಪ್ಪಕೇರಿ, ಅಶೋಕ ರಸ್ತೆ, ತುಳುಜಾ ಭವಾನಿ ರಸ್ತೆ, ಅನವೇರಪ್ಪ ಕೇರಿ, ಹಾವಿನಕೇರಿ, ಲಷ್ಕರ್ ಮೊಹಲ್ಲಾ, ಮೀನುಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.