Girl in a jacket

ಎಟಿಎಂ ಹಾಗೂ ಬ್ಯಾಂಕ್ ಸುರಕ್ಷತೆ ಕುರಿತು 15 ದಿನದ ಗಡುವು-ಪರಾಮರ್ಶೆ ಸಭೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಖಡಕ್ ಸೂಚನೆ



ಸುದ್ದಿಲೈವ್/ಶಿವಮೊಗ್ಗ

ಇಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ  ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು,  ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗದ ಬ್ಯಾಂಕ್  ಅಧಿಕಾರಿಗಳ ಪರಾಮರ್ಶೆ ಸಭೆ ನಡೆದಿದೆ,  ಸಭೆಗೆ 90 ಕ್ಕೂ ಹೆಚ್ಚು ಬ್ಯಾಂಕ್ ಗಳ ಅಧಿಕಾರಿಗಳು ಭಾಗವಹಿಸಿದ್ದರು. 

ಅರ್ಹ ತರಬೇತುದಾರರನ್ನ ನೇಮಿಸಿಕೊಳ್ಳುವಂತೆ, ಗ್ರಾಹಕರ ಹಣದ ಸುರಕ್ಷತೆಗೆ ಎಟಿಎಂ ಲೂಟಿಯಾದರೆ ಸುರಕ್ಷತೆಯ ಕೊರತೆಗಳು ಎದ್ದು ಕಾಣುತ್ತಿರುವ ಬಗ್ಗೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ತಿಳಿಸಿದರು.  ಸಿಸಿ ಟಿವಿ ಅಳವಡಿಸಿ ನುರಿತ ಸೆಕ್ಯೂರಿಟಿ ಗಾರ್ಡನ್ನ ನೇಮಿಸಿಕೊಳ್ಳಬೇಕು.  (ಐಎಸ್ ಡಿ) ಆಂತರಿಕ ಭದ್ರತಾ ವಿಭಾಗದಿಂದ ಪರವಾನಗಿ ಪಡೆದ ಸೆಕ್ಯೂರಿಟಿ ಏಜೆನ್ಸಿಗೆ ಬ್ಯಾಂಕ್ ಮತ್ತು ಎಟಿಎಂನ ಭದ್ರತೆ ಒದಗಿಸಬೇಕು ಹಾಗೂ  ಸೆಕ್ಯೂರಿಟಿ ಆಡಿಟ್ ನ್ನ ಬ್ಯಾಂಕುಗಳು ಮೊದಲು ಮಾಡಿಸುವಂತೆ ಸೂಚಿಸಿದರು. 

ವಿನೋಬ ನಗರದಲ್ಲಿ ಬ್ಯಾಂಕ್ ನ ಎಟಿಎಂ ನ್ನ ಜೆಸಿಬಿ ಮೂಲಕ ಲೂಟಿ ಮಾಡಲು ಯತ್ನಿಸಿದ ಪ್ರಕರಣ ಇತ್ತೀಚಿನ ವರ್ಷದಲ್ಲಿ ನಡೆದಿತ್ತು. ವಿನೋಬ ನಗರದ ಬ್ಯಾಂಕ್ ನಲ್ಲಿಯೇ ಕಳ್ಳತನ ನಡೆದಿತ್ತು. ಅಡಿಷನಲ್ ಎಸ್ಪಿ ಕಾರ್ಯಪ್ಪನವರು ಮಾತನಡಿ, ಕೆಲ ಬ್ಯಾಂಕ್ ನವರಿಗೆ ನಮ್ಮ  ಬ್ಯಾಂಕ್ ನಲ್ಲಿ ಇದುವರೆಗೆ ಕಳುವಾಗಿಲ್ಲ ಎಂಬ ಭಾವನೆ ಹೊಂದಿದಂತೆ ಕಂಡು ಬಂದಿದೆ. ಮೊದಲು ಸೆಕ್ಯೂರಿಟಿಯನ್ನ ಮತ್ತು ಸೆಕ್ಯೂರಿಟಿಗೆ ಬೇಕಾದ ಅಳತೆಯನ್ನ ಮಾಡಿಕೊಳ್ಳುವಂತೆ ಸೂಚಿಸಿದರು.  


ಬ್ಯಾಂಕ್ ವ್ಯವಹಾರದ ಸಮಯದಲ್ಲಿ ದಿನಗಳಲ್ಲಿ ನಡೆಯುತ್ತಿಲ್ಲ. ಆದರೆ ವ್ಯವಹಾರ ಮುಗಿದ ನಂತರ ರಜಾದಿನಗಳಲ್ಲಿ ನಡೆದಿದೆ. ಸಿಸಿ ಟಿವಿಯನ್ನ ಗಂಟೆಗೆ ಒಮ್ಮೆ ತಪಾಸಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.  ಪೊಲೀಸರು ಬೀಟ್ ಪಾಯಿಂಟ್ ಗೆ ಬರುತ್ತಿದ್ದೀರಾ ಎಂಬ ಮಾಹಿತಿಯನ್ನ ಸಂಗ್ರಹಿಸಲು ಕ್ರಮ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. 

ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ನ್ಯಾಮತಿಯಲ್ಲಿ ಇತ್ತೀಚೆಗೆ ಬ್ಯಾಂಕ್ ಲೂಟಿಯಾದ ಉದಾಹರಣೆಯನ್ನ ಪ್ರಸ್ತಾಪಿಸಿ ಪೊಲೀಸ್ ಇಲಾಖೆ ಮತ್ತು ಸೆಕ್ಯೂರಿಟಿ ಆಡಿಟ್ ಗಳ ಬಗ್ಗೆ ಸೂಚಿಸಿದ ಕೆಲ ಭದ್ರತೆ ತೆಗೆದುಕೊಳ್ಳಲು ಆಗದ ಬ್ಯಾಂಕ್ ನಲ್ಲಿ ಕಳುವಾಗಿದೆ.   

6-7 ತಿಂಗಳ ಹಿಂದೆ ವಿನೋಬ ನಗರದ ಎಟಿಎಂ ಕಳ್ಳತನವಾಗಿತ್ತು. ಅಲ್ಲಿ ಎಟಿಎಂ ಒಳಗೆ ಮತ್ತು ಸುತ್ತಮುತ್ತ ಸಿಸಿ ಟಿವಿ ಅಳವಡಿಸಿದ್ದರು ಕಳುವಾಗಿತ್ತು. ಕೆಲ ಲೋಪಗಳಿಂದಾಗಿ ಎಟಿಎಂ ಹಣ ಕಳುವಾಗಿತ್ತು. ಬ್ಯಾಂಕ್ ಮತ್ತು ಎಟಿಎಂಗೆ ಸಿಸಿ ಟಿವಿ ಅಳವಡಿಕೆಗೆ ಹಣ ಬರೊಲ್ಲ ಎಂದರೆ ಅದಕ್ಕೆ ಪೊಲೀಸ್ ಇಲಾಖೆ ಜವಬ್ದಾರಿ ಅಲ್ಲ ಎಂದು ಸೂಚಿಸಿದರು. 

15 ದಿನಗಳಲ್ಲಿ ಈ ಸಿಸಿ ಟಿವಿಯನ್ನ ಎಇಎಂ ಮತ್ತು ಬ್ಯಾಂಕ್ ಗಳಲ್ಲಿ ಅಳವಡಿಸಲು ಸೂಚಿಸಲಾಗಿದೆ. ಮರದ ಬಾಗಿಲನ್ನ ಎಟಿಎಂ ಮತ್ತು ಬ್ಯಾಂಕ್ ನವರು ಅಳವಡಿಸಿಕೊಳ್ಳದಂತೆ ಸೂಚಿಸಲಾಯಿತು.  ಬ್ಯಾಂಕ್ ನಲ್ಲಿ ಸೈರನ್ ಅಳವಡಿಸಬೇಕು. ಸಿಸಿ ಟಿವಿ ಸ್ಟೋರೇಜ್ ಗೆ ಸುರಕ್ಷಿತ ಸ್ಥಳದಲ್ಲಿರಿಸಬೇಕು. ಅರ್ಹ ಮತ್ತು ತರಬೇತಿ ಸೆಕ್ಯೂರಿಟಿ ಗಾರ್ಡ್ ನ್ನ ನೇಮಿಸಿಕೊಳ್ಳಲು ಎಸ್ಪಿ ಅವರು ಸಭೆಗೆ ಸೂಚಿಸಿದರು. 

ಸೆಕ್ಯೂರಿಟಿ ಆಡಿಟ್ ನಲ್ಲಿ ಸೂಚಿಸಿದ ಭದ್ರತೆಯನ್ನ ಬ್ಯಾಂಕ್ ಅಳವಡಿಸಿಕೊಳ್ಳದಿದ್ದರೆ, ಕಳವು ರಾಬರಿ ಘಟನೆ ನಡೆದಾಗ ಬ್ಯಾಂಕ್ ಅವರನ್ನೂ  ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಎಸ್ಪಿ ಅವರು ಎಚ್ಚರಿಸಿದರು. ಬೀಟ್ ಬುಕ್ ಗಳನ್ನ ಬ್ಯಾಂಕ್ ನವರು ಇಡಬೇಕು. ಅಲ್ಲಿ ಪೊಲೀಸರು ಬಂದು ಸಹಿ ಹಾಕಬೇಕು ಎಂದು ಸೂಚಿಸಬೇಕು. 

ಬ್ಯಾಂಕ್ ನವರ ಸೀನಿಯರ್ ಮ್ಯಾನೇಜರ್ ಅವರ ವೈಯುಕ್ತಿಕ ಮೊಬೈಲ್ ಪಡೆದು ವಾಟ್ಸ್ ಗ್ರೂಪ್ ರಚಿಸಲಾಗುವುದು ಎಂದು ತಿಳಿಸಿರುವ ಎಸ್ಪಿ ಸೆಕ್ಯೂರಿಟಿ ಆಡಿಟ್ ನಲ್ಲಿ ಸೂಚಿಸಿರುವ ರಕ್ಷಣ ಭದ್ರತೆಯನ್ನ 15 ದಿನಗಳನ್ನ  ಅಳವಡಿಸಿಕೊಳ್ಳಲು ಸೂಚಿಸಿದರು. ಪ್ರಾಂತೀಯ ಬ್ಯಾಂಕ್ ಶಾಖೆಗೂ ತಮಗಮ ಬ್ರ್ಯಾಂಚ್ ಕಚೇರಿಯ ಸೆಕ್ಯೂರಿಟಿ ಭದ್ರತೆ ಬಗ್ಗೆ ಇಲಾಖೆ ಪತ್ರ ರವಾನಿಸುವ ಭರವಸೆಯನ್ನ  ಎಸ್ಪಿಯವರು ನೀಡಿದರು. 

ಸೆನ್ ಪೊಲೀಸ್ ಠಾಣೆಯ  ಡಿವೈಎಸ್ಪಿ ಕೃಷ್ಣ ಮೂರ್ತಿ ಮಾತನಾಡಿ, ಆನ್ ಲೈನ್ ನಲ್ಲಿ ಹಣಕಳೆದುಕೊಂಡು ಬರುವ ಗ್ರಾಹಕರು ಬ್ಯಾಂಕ್ ಗೆ ಬಂದಾಗ ಮೊದಲು ಪೊಲೀಸರಿಗೆ ತಿಳಿಸಿ ಎನ್ನುತ್ತೀರಿ. ಹಾಗೆ ಮಾಡದೆ ಮೊದಲು ಬ್ಯಾಂಕ್ ಅಕೌಂಟ್‌ನ್ನ‌ ಸೀಜ್ ಮಾಡಿ ಎಂದು ಕೋರಿದರು‌. 1920 ನಲ್ಲಿ ಬ್ಯಾಂಕ್ ಸ್ಟೇಟ್ ಮೆಂಟ್ ಕೊಡಲು ಕೇಳುತ್ತಾರೆ. ಹಾಗಾಗಿ ಬ್ರ್ಯಾಂಚ್ ಗೆ ಬರುವ ಗ್ರಾಹಕರು ಅವರ ಅಕೌಂಟ್ ನಿಂದ ಹಣ ಕಳೆದುಕೊಂಡರೆ ಮೊದಲು ಫ್ರೀಜ್ ಮಾಡಲು ಕೋರಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close