ಸುದ್ದಿಲೈವ್/ಶಿವಮೊಗ್ಗ
ನಗರ ಸಭೆ ಮಾಜಿ ಸದಸ್ಯ ಆರ್. ಲಕ್ಷ್ಮಣ್ ಆತ್ಮಹತ್ಯೆಯ ಬೆನ್ನಲ್ಲೇ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕನ ಮನೆಯ ಮೇಲೆ ದಾಳಿ ನಡೆಸಿದ ತುಂಗ ನಗರ ಪೊಲೀಸರಿಗೆ ಭರ್ಜರಿ ದಾಖಲಾತಿಗಳು ಪತ್ತೆಯಾಗಿದೆ.
ಶಿವಮೊಗ್ಗದಲ್ಲಿ ನಗರ ಸಭೆ ಸದಸ್ಯರಾಗಿದ್ದಾಗ ಸದಸ್ಯರಾಗಿದ್ದ ಆರ್. ಲಕ್ಷ್ಮಣ್ ಬಡ್ಡಿವ್ಯವಹಾರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿನೋಬ ನಗರದ ಫ್ರೀಡಂ ಪಾರ್ಕ್ ಪಕ್ಕದಲ್ಲಿರುವ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕ ಮೋಹನ್ ಬಳಿ ಪಡೆದ ಸಾಲ ಬೃಹದಾಕಾರವಾಗಿ ಬೆಳೆದ ಪರಿಣಾಮ ಲಕ್ಷ್ಮಣ್ ನ.23 ರಂದು ಗೋಪಾಳದ ಪಾರ್ಕ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೋಹನ್, ಮಗ ಪೃಥ್ವಿ ಮತ್ತು ವೆಂಕಟೇಶ್ ಮೂವರ ವಿರುದ್ಧ ಲಕ್ಷ್ಮಣ್ ಅವರ ಸಾವಿಗೆ ಕಾರಣವೆಂದು ಮೃತರ ಮಗ ಪ್ರದೀಪ್ ನೀಡಿದ ದೂರಿನ ಅನ್ವಯ ಪ್ರಕರಣ ತುಂಗ ನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕನ ಮನೆಯ ಮೇಲೆ ದಾಳಿ ಸಹ ನಡೆದಿತ್ತು.
ಬಡ್ಡಿ ದಂಧೆ ನಡೆಸುವರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಈ ಹಿಂದೆ ಖಡಕ್ ಸೂಚನೆಯನ್ನೂ ನೀಡಿದ್ದರು. ಬಡ್ಡಿ ವ್ಯವಹಾರ ನಡೆಸುವರ ವಿರುದ್ದ ದೂರು ದಾಖಲಿಸುವುದಾಗಿ ಎಚ್ಚರಿಕೆಯನ್ನ ನೀಡಿದ್ದರು. ಆದರೆ ಈ ಎಚ್ಚರಿಕೆಯನ್ನ ಕಡೆಗಣಿಸಿ ಒಳಗೊಳಗೆ ಬಡ್ಡಿ ವ್ಯವಹಾರ ನಡೆಯುವುದರಿಂದ ಇದು ಇಲಾಖೆ ಗಮನಕ್ಕೆ ಬಂದಿರುವುದಿಲ್ಲ. ಅನಾಹುತಗಳು ಸಂಭವಿಸಿದಾಗ ಈ ರೀತಿ ಸ್ಪೋಟಗೊಳ್ಳುತ್ತದೆ.
ಎರಡು ದಿನಗಳ ಹಿಂದೆ ಪೃಥ್ವಿ ಮ್ಯಾನ್ಷನ್ ಕಟ್ಟಡದ ಮಾಲೀಕನ ಮನೆಯ ಮೇಲೆ ನಡೆದ ದಾಳಿಯಲ್ಲಿ ಮೋಹನ್ ಮತ್ತು ಅವರ ಪುತ್ರ ನಾಪತ್ತೆಯಾಗಿದ್ದರು. ಆದರೆ 150 ಕ್ಕೂ ಹೆಚ್ಚು ವಿವಿಧ ಬ್ಯಾಂಕಿನ ಗ್ರಾಹಕರ ಸಹಿ ಮಾಡಿಸಿಕೊಂಡ ಖಾಲಿ ಚೆಕ್ ಗಳು ಪತ್ತೆಯಾಗಿವೆ. 90 ಜನ ವಿವಿಧ ಅಕೌಂಟ್ ನಲ್ಲಿರುವ 150 ಕ್ಕೂ ಹೆಚ್ಚು ಚೆಕ್ ಗಳು ಪತ್ತೆಯಾಗಿವೆ. ದುರ್ದೈವ ವಶಾತ್ ಲಕ್ಷ್ಮಣ್ ಅವರ ಹೆಸರಿನ ಯಾವುದೇ ಚೆಕ್ ಗಳು ಪತ್ತೆಯಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.
ವಿವಿಧ ಬ್ಯಾಂಕ್ ಗಳ ವಿವಿಧ ಬ್ಯಾಂಕ್ ಗಳ ಚೆಕ್ ಪತ್ತೆಯಾಗಿರುವುದರಿಂದ ಮೋಹನ್ ಅವರ ಬಡ್ಡಿ ವ್ಯವಹಾರ ನಡೆಸುವುದು ಕನ್ಫರ್ಮ್ ಆಗಿದೆ.