Girl in a jacket

ನ.22 ರಂದು ಡಿಸಿ ಕಚೇರಿ ಎದುರು ಬೆಳಗ್ಗಿಂದ ಸಂಜೆಯ ವರೆಗೆ ಹೋರಾಟ-ಟಿ.ಡಿ.ಎಂ


ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ನ ಒಡೆದು ಆಳುವ ನೀತಿ ಮತ್ತು ತುಷ್ಠೀಕರಣದಿಂದ ಮನಮೋಹನ್ ಸಿಂಗ್ ಅವಧಿಯಲ್ಲಿ ಆದ ವಕ್ಫ್ ತಿದ್ದುಪಡಿಯಿಂದಾಗಿ ಕರಾಳ ಶಾಸನ ಹೊರಬಂದಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಡೀ ದೇಶದಲ್ಲಿ 1 ಲಕ್ಷ ಎಕರೆ ಗೂ ಹೆಚ್ಚು ತನ್ನದು ಎಂದು ಹೇಳಿ ವಕ್ಫ್ ಹೆಸರನ್ನ ತರಾತುರಿಯಲ್ಲಿ ಆದಾರ ರಹಿತವಾಗಿ ಜಮೀನು ಸೇರಿಸಲಾಗುತ್ತಿದೆ. ಶಿವಮೊಗ್ಗವೂ ಸೇರಿ 32 ಜಿಲ್ಲೆಗಳ ವಕ್ಫ್ ಜಾಗ ಆಗಬೇಕೆಂದು ಸೂಚನೆ ಹೊರಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಸಚಿವ ಜಮೀರ್ ವಕ್ಫ್ ಅದಾಲತ್ ನ್ನ ಕಾಟಾಚಾರಕ್ಕಾಗಿ ನಡೆಸುತ್ತಿಲ್ಲ. ಸಿಎಂ ಸೂಚನೆಯಿಂದ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾವಾರು ಪ್ರಗತಿ ಪರಿಶೀಲನೆ ಸಭೆ ನಡೆಸಲಾಗಿದೆ. ಪ್ರತಿಯೊಬ್ಬ ಭೂಮಾಲಿಕ ನೆಮ್ಮದಿ ಕಳೆದು ಕೊಂಡಿದ್ದಾನೆ. ಹಾಗಾಗಿ ಸಚಿವ ಜಮೀರ್ ಅಹ್ಮದ್ ರನ್ನ ಸಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಗೃಹ ಇಲಾಖೆ ಬದುಕಿದ್ದರೆ ಸ್ವಯಂ ಪ್ರೇರಿತವಾಗಿ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು. 

ಅನ್ವರ್ ಮಾಣಿಪಾಡ್ ವರದಿ ವಕ್ಫ್ ಸಂಸ್ಥೆ ಭ್ರಷ್ಠಾಚಾರ ನಡೆಸಿದೆ. ಊರು ಊರಿನಲ್ಲಿ ವಕ್ಫ್ ಗೆ ಸೇರಿಸಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ವಕ್ಫ್ ತಿದ್ದುಪಡಿ ಆಗಲಿದೆ ಎಂಬ ಹಿನ್ನಲೆಯಲ್ಲಿ 34 ಕಡೆ ಜಮೀನು ವಕ್ಫ್ ಗೆ ಸೇರಿಸುವ ರಾಜ್ಯ ಸರ್ಕಾರದ ಸುತ್ತೋಲೆ ಡಿಸಿ ಕಚೇರಿ ತಲುಪಿದೆ ಎಂದರು. 

ಇದನ್ನ ಖಂಡಿಸಿ ನ.21 ಮತ್ತು 22 ರಿಂದ ಇಡೀ ರಾಜ್ಯಾದ್ಯಂತ   ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ.‌ ಶಿವಮೊಗ್ಗದಲ್ಲಿ ನ.22 ರಂದು ನಗರದ ಡಿಸಿ ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಯಲಿದ್ದು ಸಾಧು ಸಂತರು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಿದ್ದಾರೆ. 

ವಿಪಕ್ಷ ನಾಯಕ ನಾರಾಯಣ ಸ್ವಾಮಿ, ಅಶೋಕ್ ಮತ್ತು ರಾಜ್ಯಾಧ್ಯಕ್ಷ ವಿಜೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಅಹವಾಲು ಸ್ವೀಕರಿಸಲಾಗುವುದು. ಜಮೀರ್ ನ್ನ ಸಂಪುಟದಿಂದ ಕೈಬಿಡುವುದು, ವಕ್ಫ್ ತಿದ್ದುಪಡಿಗೆ ಆಗ್ರಹಿಸಿ ಹೋರಾಟ ನಡೆಸಲಸಗುವುದು. 

ಸಂಸದ ರಾಘವೇಂದ್ರ ಹೇಳಿಕೆ

ದೇಶದಲ್ಲಿ ರಕ್ಷಣ ಮತ್ತು ರೈಲ್ವೆ ಇಲಾಖೆ ಬಿಟ್ಟರೆ ಮೂರನೇ ದೊಡ್ಡ ಸಂಸ್ಥೆ ಜಮೀನು ಹೊಂದಿರುವುದು ವಕ್ಫ್ ಇಲಾಖೆ ಆಗಿದೆ. 9½ ಲಕ್ಷ ಕ್ಕೂ ಹೆಚ್ಚು ಜಮೀನನ್ನ ವಕ್ಫ್ ಹೊಂದಿದೆ 1½ ಲಕ್ಷ ಕೋಟಿ ಆಸ್ತಿಯನ್ನ ಹೊಂದಿದೆ. ಈ ಆಸ್ತಿಗಳು ದುಪ್ಪಟ್ಟು ಆಗಿದ್ದು ಹೇಗೆ ಎಂದು ಪ್ರಶ್ನಿಸಿದರು. 

2009 ನೇ ಇಸವಿ ಮಾಹಿತಿಪ್ರಕಾರ 4½ ಲಕ್ಷ ಆಸ್ತಿ ಇತ್ತು 15 ವರ್ಷಕ್ಕೆ 8 ಲಕ್ಷದ 70 ಸಾವಿರಕ್ಕೂ ಹೆಚ್ಚು ಆಸ್ತಿ ದುಪ್ಪಟ್ಟಾಗಿದೆ. ದೇಶದ ಮುಂದೆ ಸೂಕ್ತ ಮಾಹಿತಿ ಇಡಲು ಪ್ರಧಾನಿಗಳು ಜೆಪಿಸಿ ರಚಿಸಿದ್ದಾರೆ. ವಕ್ಫ್ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ 68330 ವಕ್ಫ್ ಆಸ್ತಿಗಳಿವೆ 29 ಸಾವಿರ ಎಕರೆ ಭೂಮಿಯನ್ನ ರೆವೆನ್ಯೂ ಇಂದ ವಾಣಿಜ್ಯಕ್ಕೆ ಬದಲಿಸಿರುವ ಪ್ರಯತ್ನ ನಡೆದಿದೆ‌ ಎಂದು ದೂರಿದರು. 

ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದ್ದಾರೆ. ತಮಿಳು ನಾಡಿನ ತಿರುಚನಾಪಳ್ಳಿಯ 1½ ಸಾವಿರ ಎಕರೆ ಜಮೀನನ್ನ ವಕ್ಫ್ ಗೆ ಸೇರಿಸಲಾಗಿದೆ. ಗುಜರಾತ್ ನ ಎರಡು ದ್ವೀಪಗಳು, ಬಿಜಾಪುರದಲ್ಲಿ ವಕ್ಫ್ ಜಮೀನಿಗೆ ತರಲಾಗಿದೆ. ಇದಾದ ಮೇಲೆ ಯಥಾಸ್ಥಿತಿ ಕಾಪಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. 

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ತರುವ ಮುನ್ನಾ ರಾಜ್ಯದ ವಕ್ಫ್ ಆಸ್ತಿ ಹೆಚ್ಚಳಕ್ಕೆ ಕೈಹಾಕಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಇದನ್ನ ಹೋರಾಟದ ಮೂಲಕ ಪ್ರತಿಭಟಿಸಲಾಗುವುದು. ಜಾನಜಾಗೃತಿ ಮಾಡಲಾಗುತ್ತಿದೆ ಎಂದರು.


ಸರ್ಕಾರಿ ನೌಕರರಿಗೆ ಸಂಬಳ ಕೊಡ್ತಾ ಇಲ್ಲ.‌ಬಿಪಿಎಲ್ ಕಾರ್ಡ್ ವಜಾ ಮಾಡುವ ಯತ್ನ ನಡೆಯುತ್ತಿದೆ. ಕ್ಯಾನ್ಸರ್ ಮೆಡಿಸಿನ್ ಒದಗಿಸಿ ಎಂದರೆ ಗುತ್ತಿಗೆ ಆಗಬೇಕು ಎಂಬ ಹೇಳಿಕೆ ಆರೋಗ್ಯ ಇಲಾಖೆಯಿಂದ ಬಂದಿತ್ತು. ಜನರ ಭರವಸೆ ಈಡೇರಿಸಲು ಆಗದ ಸರ್ಕಾರ ಈಗ ಶುಲ್ಕ ಹೆಚ್ಚಳಕ್ಕೂ ಕೈ ಹಾಕಿದೆ ಎಂದರು. 

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಎಂದು ಹೇಳಿದ್ದಾರೆ. ಇಂತಹ ಹೇಳಿಕೆ ಕೈಬಿಡಬೇಕು ಎಂದ ಅವರು ಸಂಸತ್ ನ.25ರಿಂದ ಅಧಿವೇಶನ ನಡೆಯಲಿದೆ. ವಿಶೇಷವಾದ ಅಧಿವೇಶನ ನಡೆಸಲಿದ್ದಾರೆ. ವಕ್ಫ್ ಮಹಿಳಾ ಬಿಲ್ಲ ಒನ್ ನೆಷನ್ ಒನ್ ಎಲೆಕ್ಷನ್ ಬಗ್ಗೆ ಮಸೂದೆ ಮಂಡನೆಯಾಗಲಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close