Girl in a jacket

ನ.24 ಕ್ಕೆ ಶಿವಮೊಗ್ಗಕ್ಕೆ ಶಿವಣ್ಣ


ಸುದ್ದಿಲೈವ್/ಶಿವಮೊಗ್ಗ

'ಮಫ್ತಿ' ಯ ಪ್ರೀಕ್ವೇಲ್ ಸಿನಿಮಾವಾಗಿ ಹೊರಬಂದಿರುವ ಭೈರತಿ ರಣಗಲ್ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಣಗಲ್ ರೌಡಿ ಅನ್ನುವುದಕ್ಕಿಂತ ನ್ಯಾಯದೆಡೆಗಿನ ಆತನ ಹೋರಾಟದ ಸಿನಿಮಾ ಅಂತನೇ ಹೇಳಬಹುದು. 

ಗೀತಾ ಪಿಚ್ಚರ್ಸ್ ನಿರ್ಮಾಣದ ಬೈರತಿ ರಣಗಲ್ ಚಲನಚಿತ್ರ ಯಶಸ್ವಿಯಾಗಿ ಓಡುತ್ತಿದೆ. ನ.15 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಅದರಂತೆ ನಗರದ ಮಲ್ಲಿಕಾರ್ಜುನ ಟಾಕೀಸ್ ನಲ್ಲಿ ಭರ್ಜರಿ ಪ್ರದರ್ಶನಗೊಳ್ಳುತ್ತಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟರಾದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು  ಭೇಟಿ ನೀಡುತ್ತಿದ್ದಾರೆ. 

ನ.24. ರಂದು ಬೆಳಗ್ಗೆ 11.ಗಂಟೆಗೆ ಮಲ್ಲಿಕಾರ್ಜುನ ಚಿತ್ರ ಮಂದಿರಕ್ಕೆ  ಆಗಮಿಸಲಿದ್ದಾರೆ.  ಅಭಿಮಾನಿಗಳೊಂದಿಗೆ ಚಿತ್ರವೀಕ್ಷಣೆ ಮಾಡುವ ಸಂದರ್ಭ ಶಿವಣ್ಣ ಮಾಧ್ಯಮ ಗಳೊಂದಿಗೆ ಮಾತನಾಡಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close