Girl in a jacket

ಸರ್ಕಾರಿ ನೌಕರರ ಸಂಘದ ಚುನಾವಣೆ, 28 ಜನ ನಿರ್ದೇಶಕರ ಆಯ್ಕೆಗೆ ಮತದಾನ ಸಂಜೆ ಮತೆಣಿಕೆ



ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಶಾಖೆಯ ಚುನಾವಣೆಯ ಮತದಾನ ಚುರುಕುಗೊಂಡಿದೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಢಶಾಲಾ ವಿಭಾಗದಲ್ಲಿ ಮತದಾನ ಭರದಿಂದ ಸಾಗಿದೆ. 

25 ಇಲಾಖೆಯಲ್ಲಿ 28 ಜನ ಆಯ್ಕೆ ಆಗಬೇಕಿದ್ದು 70 ಜನ ಸ್ಪರ್ಧಾಳುಗಳು ಕಣದಲ್ಲಿದ್ದಾರೆ. 25 ಇಲಾಖೆಗಳಲ್ಲಿ 2011 ಮತಗಳಿದ್ದು ಬೆಳಿಗ್ಗೆ 9 ಗಂಟೆಯಿಂದ ಮತದಾನ ಭರದಿಂದ ಸಾಗಿದೆ. ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದೆ. 

ಕೃಷಿ ಇಲಾಖೆಯ ತಾಂತ್ರಿಕೇತರ ವೃಂದ,  ಪಂಚಾಯತ್ ರಾಜ್ ಇಂಜುನಿಯರ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ, ನೀರಾವರಿ,  ತಾಂತ್ರಿಕ ಶಿಕ್ಷಣ ಇಲಾಖೆ, ಅಬಕಾರಿ, ಅರಣ್ಯ ಇಲಾಖೆ ಸೇರಿದಂತೆ 25 ಇಲಾಖೆಗಳ ನೌಕರರು ಕಣದಲ್ಲಿದ್ದಾರೆ. 

ಇಂದು ಸಂಜೆ 4 ಗಂಟೆಯ ವರದಗೆ ಮತದಾನ ನಡೆಯಲಿದ್ದು  4-30 ರಿಂದ ಮತ ಎಣಿಕೆ ಆರಂಭವಾಗಲಿದೆ.  11 ಬೂತ್ ಗಳನ್ನ ನಿರ್ಮಿಸಲಾಗಿದ್ದು ಮಧ್ಯಾಹ್ನ 12-30 ರ ವೇಳೆಗೆ 50% ಮತದಾನವಾಗಿದೆ. 

66 ಇಲಾಖೆಗಳಿಗೆ ಚುನಾವಣೆ ನಡೆಯಬೇಕಿದ್ದು, 38 ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದ 28 ಜನರ ಆಯ್ಕೆಗೆ ಇಂದು ಮತದಾನ ನಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close