Girl in a jacket

ಮಣ್ಣು ತೊಳೆದು ಮರಳು ತೆಗೆಯುವ ದಂಧೆ, 35 ಮೆಟ್ರಿಕ್ ಟನ್ ಮರಳು ಪತ್ತೆ



ಸುದ್ದಿಲೈವ್/ತೀರ್ಥಹಳ್ಳಿ

ಮಣ್ಣು ತೊಳೆದು ಮರಳು ಮಾಡುವ ದಂಧೆಯಲ್ಲಿ ಕಣ್ಣನ್ ಏಳುಮಲೈ ವಿರುದ್ಧ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. 

ತಾಲೂಕಿನ ನರಟೂರು ಗ್ರಾಮಂಚಾಯಿತಿಯ ಶಿರುಪತಿ ಗ್ರಾಮದಲ್ಲಿ ಕಣ್ಣನ್ ಏಳುಮಲೈಯವರು ಯಾವುದೇ ಅನುಮತಿಯಿಲ್ಲದೆ ಮಣ್ಣನ್ನ ತೊಳೆದು ಮರಳು ಮಾಡುವ ದಂಧೆಯಲ್ಲಿ ತೊಡಗಿರುವುದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ತಿಳಿದು ಬಂದಿದೆ. 

ಶಿರುಪತಿ ಹಳ್ಳದಲ್ಲಿ ಫಿಲ್ಟರ್ ನಿರ್ಮಿಸಿ ಮರಳುಗಾರಿಕೆಯನ್ನ ರಚನೆ ಮಾಡಿಕೊಳ್ಳಲಾಗಿತ್ತು. ಇದರಿಂದ ಸ್ಥಳದಲ್ಲಿ 35 ಮೆಟ್ರಿಕ್ ಟನ್ ಮರಳು ಪತ್ತೆಯಾಗಿದೆ. ಇಲ್ಲಿಂದ ಬೇರೆಡೆಗೆ ಮರಳು ಸಾಗಾಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 

ಸ್ಥಳೀಯರನ್ನ ವಿಚಾರಿಸಿದಾಗ‌ ಈ ಸ್ಥಳ ಕಣ್ಣನ್ ಏಳುಮಲೈ ಎಂಬುವರಿಗೆ ಮಾಹಿತಿ ಲಭ್ಯವಾಗಿದೆ. ಇಕಾಝೆಯ ಮಹಿಳಾ ಅಧಿಕಾರಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close