Girl in a jacket

ಡಿಎಆರ್ ನಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವ




ಸುದ್ದಿಲೈವ್/ಶಿವಮೊಗ್ಗ

69 ನೇ ಕನ್ನಡ ರಾಜ್ಯೀತ್ಸವ ಕಾರ್ಯಕ್ರಮ ಡಿಎಆರ್ ಮೈದಾನದಲ್ಲಿ ನಡೆದಿದೆ. ಜಿಲ್ಲಾಡಳಿತ, ಜಿಲ್ಲಾಪಂಚಾಯಿತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ರಾಜ್ಯೋತ್ಸವ ಮೊದಲು ಸೈನ್ಸ್ ಮೈದಾನದಿಂದ ಕನ್ನಡಾಂಬೆಯ ಸ್ಥಬ್ದ ಚಿತ್ರ ಹೊತ್ತು ಡಿಎಆರ್ ಮೈದಾನದವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದಿತು. 

ಡಿಎಆರ್ ಮೈದಾನದಲ್ಲಿ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿಸಿಗಳ ಅನುಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್ ಅವರಿಂದ ರಾಷ್ಟ್ರಧ್ವಜಾರೋಹಣ ನಡೆಯಿತು. ಈ ವೇಳೆ ಮಾತನಾಡಿದ ಸಿಇಒ ಹೇಮಂತ್, ಮನೆಮನೆಗಳ ಮಾತಾಗಿ ಕನ್ನಡ ಬೆಳೆಯಬೇಕಿದೆ, ಕುವೆಂಪು ಅವರ ಸಾಲುಗಳನ್ನ ಸದಾ ನೆನಪಿಟ್ಟುಕೊಳ್ಳಬೇಕು. ಕಾವೇರಿಯಿಂದ ಗೋದಾವರಿವರೆಗೂ ಕನ್ನಡ ಭಾಷೆ ಮಾತನಾಡುವವರು ಇದ್ದರುಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ ಎಂದರು. 

2000 ಇತಿಹಾಸದ ಕನ್ನಡ ಮಾಧ್ಯಮ ಪತ್ರಿಕೋದ್ಯಮ ಮತ್ತು  ಶಾಲೆಗಳಲ್ಲಿ ಹೆಚ್ಚು ಕಂಡುಬರುತ್ತದೆ. ಕನ್ನಡ ಮಾಧ್ಯಮ ಶಾಲೆಗಳನ್ನ ಉಳಿಸಲು ಸರ್ಕಾರ ಹೆಚ್ಚು ಶ್ರಮವಹಿಸಿದೆ. ಸಂಘಟನೆಗಳು ಭಾಷೆಗಳನ್ನ ಕಾಪಾಡುವ ನಿಟ್ಟಿನಲ್ಲಿ ಹೋರಾಡುತ್ತಾ ಬಂದಿವೆ. ದಾಸರು, ಶಿಶುನಾಳ ಶರೀಫರು, ವಚನ ಸಾಹಿತಿಗಳಿಂದ ಕನ್ನಡ ಉಳಿದು ಕೊಂಡು ಬಂದಿದೆ. 

8 ಜನ ಪರಿಚಾರಕರು ರಾಷ್ಟ್ರದ ಉನ್ನತ ಪ್ರಶಸ್ತಿ ಪಡೆಯುವ ಮೂಲಕ  ಪಡೆದಿದ್ದಾರೆ. ಮಳೆ ಈ ಬಾರಿ ಜಿಲ್ಲೆಯಲ್ಲಿ ತೃಪ್ತಿ ತಂದಿದೆ. ಕೃಷಿಯಲ್ಲಿ ಫಸಲು ಕೈಸಿಗುವ ನಿರೀಕ್ಷೆ ಇದೆ. ಸುಕ್ಷಿತ ಭಾಷೆಯನ್ನ ಕಟ್ಟುವ ಜವಬ್ದಾರಿ ನಮ್ಮದಾಗಿದೆ. ಚಂದ್ರಶೇಖರ್, ತೀರ್ಥಹಳ್ಳಿ ಡಾ.ಕೃಷ್ಣಪ್ಪ, ಹೊನ್ನೇಮರಡಿನ ಶ್ರೀಮತಿ ನೊಮಿಟೋ ಕಾಮದಾರ್ ಪ್ರಶಸ್ತಿ ಲಭಿಸಿದೆ. ಇವೆಲ್ಲಾ ಸಂತೋಷ ತಂದಿದೆ ಎಂದರು. 

14 ಸ್ಥಬ್ಧ ಚಿತ್ರಗಳ ಪ್ರದರ್ಶನ 

ನಂತರ ಸ್ಥಬ್ಧ ಚಿತ್ರಗಳ ಪ್ರದರ್ಶನ ನಡೆಯಿತು. ಮೊದಲಿಗೆ ಮಹಾನಗರ ಪಾಲಿಕೆಯ ಭುವನೇಶ್ವರಿ ದೇವಿಯನ್ನ‌ಹೊತ್ತು ತಂದ ವಾಹನ, ಕೇಸ್ಅರ್ ಟಿಸಿ ಬಸ್, ಡಿಹೆಚ್ಒ, ಹಿಂದುಳಿದ ವರಘಗಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ದಿ ನಿಗಮ, ಸಖಿ ಒನ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ, ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಚಂದ್ರಗುತ್ತಿ ದೇವಾಲಯ ಸ್ಥಬ್ದ ಚಿತ್ರ ಗಮನ ಸೆಳೆದಿತ್ತು. ಪಾಲಿಕೆಯ ಕವಿಶೈಲ ಸ್ಥಬ್ದ ಚಿತ್ರ, ಪೊಲೀಸ್ ಇಲಾಖೆಯ ಸಿಇಎನ್ ಮತ್ತು ಗಾಂಜಾ ನಿಷೇಧದ ಜಾಗೃತಿಯ ಸ್ಥಬ್ಧ ಚಿತ್ರಗಳು ಗಮನ ಸೆಳೆದಿದೆ. 

ತುಂಗಭದ್ರ ಅಭಿಯಾನದ ಬ್ಯಾನರ್ ಹಿಡಿದು ಬಂದ ಮಕ್ಕಳು

ಭದ್ರಾವತಿಯ ಜಾನಪದ ತಂಡದಿಂದ ವೀರಗಾಸೆ ಪ್ರದರ್ಶನ, ಶಿವಮೊಗ್ಗದ ಕಲಾತಂಡದಿಂದ ಡೊಳ್ಳು ಕುಣಿತ ನಡೆದರೆ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲು ಪೋದಾರ್ ಶಾಲೆಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.‌ ನ್ಯಷನಲ್ ಪಬ್ಲಿಕ್ ಶಾಲೆಯಿಂದ ನಿರ್ಮಲ ತುಂಗಭದ್ರ  ಅಭಿಯಾನದ ಬ್ಯಾನರ್ ಹಿಡಿದು ಬಂದಿದ್ದು ಗಮನಸೆಳೆದಿತ್ತು. ಭಾರಿಸು ಕನ್ನಡ ಡಿಂಡಿಮವ ಹಾಡಿಗೆ ಶಾಲೆಯ ಮಕ್ಕಳು ನೃತ್ಯಸಿದರು. 


ಎನ್ ಪಿಎಸ್, ಪೋದಾರ್, ಅನನ್ಯ ವಿದ್ಯಸಂಸ್ಥೆಯ ಶಾಲೆ ಮಕ್ಕಳ ನಡುವೆ ಸ್ಪರ್ಧೆಯ ರೀತಿಯಲ್ಲಿ ನೃತ್ಯಗಳು ಮೂಡಿಬಂದವು. ನಂತರ ಉತ್ತಮ ನೃತ್ಯ ಪ್ರದರ್ಶನಗಳಿಗೆ ಪ್ರಶಸ್ತಿ ಲಭಿಸಿದೆ.  ಕಾರ್ಯಕ್ರಮದಲ್ಲಿ ಶಾಸಕರಾದ ಚೆನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್, ಎಸ್ಪಿ ಮಿಥುನ್ ಕುಮಾರ್ ಜಿಕೆ, ತಹಶೀಲ್ದಾರ್ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close