Girl in a jacket

800 ಮರಿಗಳಲ್ಲಿ ಒಂದು ಓಡು ಮರಿ ಮಿಸ್ಸಿಂಗ್-ಠಾಣೆ ಮೆಟ್ಟಿಲೇರಿದ ಪ್ರಕರಣ



ಸುದ್ದಿಲೈವ್/ಶಿವಮೊಗ್ಗ

800 ಕುರಿ, ಮೇಕೆ ಹಾಗೂ ಓಡು ಮರಿಗಳಲ್ಲಿ ಒಂದು ಓಡು ಮರಿಯನ್ನ ಕಳ್ಳತನವಾಗಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 45 ಸಾವಿರ ರೂ. ಓಡುಮರಿ ಕಳ್ಳತನದಿಂದ ಲುಕ್ಸಾನ್ ಆಗಿದೆ ಎಂದು ರಮೇಶ್ ನಾಯ್ಕ್ ದೂರು ದಾಖಲಿಸಿದ್ದಾರೆ. 

ಹಾವೇರಿ ತಾಲೂಕು ಸವಣೂರು ತಾಲೂಕಿನ ಹತ್ತಿಮತ್ತೂರಿನ ರಮೇಶ್ ನಾಯ್ಕ್ ಜೀವನೋಪಾಯ್ಕಾಗಿ ಕುರಿ ಸಾಗಾಣಿಕೆ ಮಾಡಿಕೊಂಡಿದ್ದಾರೆ. ಕುರಿಗಳ ಮಂದೆಯನ್ನ ಊರಿನಿಂದ ಊರಿಗೆ ಹೊಡೆದುಕೊಂಡು ಹೋಗಿ ಕುರಿ ಮೇಯಿಸುವುದೇ ಇವರ ಕಾಯಕವಾಗಿದೆ. 

ಅಕ್ಟೋಬರ್ 14 ರಂದು ಭಗವತಿ ಕೆರೆಯ ಹತ್ತಿರದ ಹನುಮಂತಾಪುರದ ಗ್ರಾಮದ 137 ರ ಮಂಜಣ್ಣನವರ ತೋಟದಲ್ಲಿ ಕುರಿ ಮೇಕೆ ಮತ್ತು ಓಡುಗಳನ್ನ ತರಬಿದ್ದ ರಮೇಶ್ ನಾಯ್ಕ್ ಬೆಳಿಗ್ಗೆ ಎದ್ದು ನೋಡಿದಾಗ ಓಡು ಮರಿಯನ್ನ ಕಿಡಿಗೇಡಿಗಳು ಕದ್ದುಕೊಂಡು ಹೋಗಿರುವುದು ತಿಳಿದು ಬಂದಿದೆ. 

800 ಕುರಿ, ಮೇಕೆ ಹಾಗೂ ಓಡುಗಳ ಮಾಲೀಕರಾದ ರಮೇಶ್ ಗೆ ಒಂದು ಓಡು ಮರಿ ಕಳುವಾಗಿದ್ದನ್ನ ಗುರುತಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close