ಸುದ್ದಿಲೈವ್/ಶಿವಮೊಗ್ಗ
ಪೊಲೀಸರು ಮಹಿಳೆಯರೊಂದಿಗೆ ಅಸಮಾಧಾನಕರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ದಿಡೀರ್ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರಭಟನೆ ನಡೆಸಿದರು.
ಬಿಜೆಪಿ ನಾಯಕರು ಡಿಸಿ ಕಚೇರಿಯನ್ನಮುತ್ತಿಗೆ ಹಾಕಿದ ವೇಳೆ ಪೊಲೀಸರು ವಶಕ್ಕೆ ಪಡೆದು ಬಸ್ ನಲ್ಲಿ ಕರೆದುಕೊಂಡು ಹೊಗಲು ಸಿದ್ದಪಡಿಸಿಕೊಂಡಿದ್ದರು. ಕಚೇದಿ ಮುಂಭಾಗದಲ್ಲಿ ಸೈಡ್ ನಲ್ಲಿ ನಿಂತಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತರನ್ನ ಮಹಿಳಾ ಪೊಲೀಸರೆ ವಾಪಾಸ್ ಹೋಗುವಂತೆ ಸೂಚಿಸಿದರು
ಈ ವೇಳೆ ಹೋಗ್ತೀವಿ ನೀವೇಕೆ ನೂಗ್ತೀರ ಎಂದು ಮಹಿಳಾ ಕಾರ್ಯಕರ್ತರು ಪ್ರಶ್ನಿಸಿದ್ದು ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ವಾಗ್ವಾದಗಳಾಗಿವೆ. ಬಿಜೆಪಿ ಕಾರ್ಯಕರ್ತರ ಕೈ ಬಳೆ ಒಡೆದಿದೆ , ಕೆಲವರ ಕೈಗೆ ಗಾಯವಾಗಿದೆ ಎಂದು ಆರೋಪಿಸಿ ಮಹಿಳಾ ಕಾರ್ಯಕರ್ತರು ದಿಡೀರ್ ಎಂದು ಪ್ರತಿಭಟನೆ ನಟೆಸಿದರು.
ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಮಹಿಳ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ನಡೆಸಿವರ ಬಗ್ಗೆ ಕ್ರಮಕೈಗೊಳ್ಳುವಂತೆ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಹಾಗೇನಾದರೂ ತಪ್ಪುಕಂಡು ಬಂದರೆ ಕ್ರಮಕೈಗೊಳ್ಳುವಂತೆ ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಾಸ್ ಪಡೆಯಲಾಗಿತು.
ಪ್ರತಿಭಟನೆಯಲ್ಲಿ ಮಾಜಿ ಉಪಮೇಯರ್ ಸುರೇಖಾ ಮುರಳೀಧರ್, ಲಕ್ಷ್ಮೀ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.