Girl in a jacket

ನಿರ್ಮಲ ತುಂಗಭದ್ರ ಅಭಿಯಾನಕ್ಕೆ ಸಿದ್ದತೆ



ಸುದ್ದಿಲೈವ್/ಶಿವಮೊಗ್ಗ

400 ಕಿಮಿ ನಿರ್ಮಲ ತುಂಗಭದ್ರ ನದಿ ಅಭಿಯಾನ ನಡೆಸಲಾಗುತ್ತಿದೆ. ನಿರ್ಮಲ ತುಂಗಭದ್ರನದಿಯ ಅಭಿಯಾನಕ್ಕೆ ಸಿದ್ದತೆ ನಡೆಯುತ್ತಿದ್ದು. ಪಾದಯಾತ್ರೆ ಶೃಂಗೇರಿಯಲ್ಲಿ ಆರಂಭವಾಗಲಿದೆ ಎಂದು ಅಭಿಯಾನದ ಪ್ರೊ.ಕುಮಾರ್ ಸ್ವಾಮಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.06 ರಂದು ಶೃಂಗೇರಿಯಲ್ಲಿ ಶೃಂಗೇರಿ ಮಠದ ಭಾರತೀತೀರ್ಥ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ನ.09 ರಂದು ಅಭಿಯಾನ ನಗರಕ್ಕೆ ಆಗಮಿಸಲಿದ್ದಾರೆ. ನ 10 ರಂದು ನಗರದಲ್ಲಿ ಅಭಿಯಾನ ನಡೆಸಿ ಹೊನ್ನಾಳಿಗೆ ಚಲಿಸಲಿದೆ ಎಂದರು. 

ಇದಕ್ಕೆ ಭಾರತೀಯ ವೈದ್ಯಕೀಯ ಸಂಘ ಬೆಂಬಲಿಸಿದೆ.  ಚರಂಡಿ ನಿರು ನದಿಗೆ ಸೇರುವುದರಿಂದ  ರಾಸಾಯನಿಕ ಗೊಬ್ವರ, ಕೀಟ ನಾಶಕ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಯನ್ನ ಸೇರುತ್ತಿದೆ. 

ಇದು ಅಲರ್ಜಿ, ಆತಂರಿಕ ಅಂಗಾಗಗಳಾದ ಲಿವರ್, ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಈ ರಾಸಾಯನಿಕಗಳ ಧೀರ್ಘಕಾಲಿಕ ಸೇವನೆ ನರ ಮತ್ತು ಮೆದುಳಿನ ಸಮಸ್ಯೆಗಳಾದ ಅಲ್ಜೈಮರ್ಸ್ ಅಥವಾ ಮರುವಿನ ಕಾಯಿಲೆಗಳು ಬರಹುದು ಎಂದು ಆತಂಕ ವ್ಯಕ್ತಪಡಿಸಿದರು. 

ಎಲ್ಲಡೆ ಅಲ್ಲಿನ ಶಾಸಕರು ಮಾಜಿ ಶಾಸಕರು, ಹಾಗೂ ಎಲ್ಲಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ.‌10 ದಿನದ ಪಾದಯಾತ್ರೆ ನಡೆಯಲಿದೆ ಹರಿಹರ ಪುರ, ತೀರ್ಥಹಳ್ಖಿ, ಶಿವಮೊಗ್ಗ ಹೊನ್ನಾಳಿ, ಹರಿಹರದ ಮೂಲಕ ಕಿಷ್ಕಂದೆ ತಲುಪಲಿದ್ದೇವೆ ಎಂದರು.

ಬಿಜೆಪಿಯ ಗಿರೀಶ್ ಪಟೇಲ್ ಮಾತನಾಡಿ, ನಗರದಲ್ಲಿ ಶಾಸಕ ಚೆನ್ನಬಸಪ್ಪನವರ ನೇತೃತ್ವದಲ್ಲಿ ಅಭಿಯಾನ ನಡೆಯಲಿದೆ. ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ ಈ ಅಭಿಯಾನದಲ್ಲಿ ಪಾಲ್ಗೊಳ್ಳಿದ್ದಾರೆ. ಆಯಾ ಪಂಚಾಯತಿಯ ಸದಸ್ಯರು  ಕಾರ್ಯಕ್ರಮದ ವ್ಯವಸ್ಥೆಯನ್ನ ಮಾಡಲಿದ್ದಾರೆ. ಎಂದರು. 

ಜನರನ್ನ ಸೇರಿಸಿ ಸಭೆಗಳನ್ನ ಆಯೋಜಿಸಲಾಗುತ್ತಿದೆ. ಕರಪತ್ರ ವಿತರಣೆ, ಬ್ಯಾನರ್ ಕಟ್ಟುವ ಕೆಲಸಗಳು ನಡೆದಿದೆ ಎಂದರು. ಮೊದಲ ಹಂತದ ಪಾದಯಾತ್ರೆ ಶೃಂಗೇರಿಯಿಂದ 200 ಕಿಮಿ ನಂತರ ಎರಡನೇ ಹಂತದ ಪಾದಯತ್ರೆ 230 ಕಿಮಿ ಪಾದಯಾತ್ರೆ ನಡೆಯಲಿದೆ ಎಂದರು. ಮೂರನೇ ಹಂತದ ಪಾದಯಾತ್ರೆಗೆ ವ್ಯವಸ್ಥೆ ಆಗಬೇಕಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close