Girl in a jacket

ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ಅಪಘಾತ-ಕಾನೂನು ವಿದ್ಯಾರ್ಥಿ ಸಾವು



ಸುದ್ದಿಲೈವ್/ಸೊರಬ


ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಉದ್ರಿ ಸಮೀಪದ ಯಲವಾಟ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 


ಬಿದರಗೇರಿ ಗ್ರಾಮದ ಎ.ಎಸ್. ದರ್ಶನ್ (21) ಮೃತ ಬೈಕ್ ಸವಾರ. ಸೊರಬದಿಂದ ಉದ್ರಿ ಮಾರ್ಗವಾಗಿ ತೆರಳುತ್ತಿದ್ದ ಬೋರ್ ವೆಲ್ ಲಾರಿ ಹಾಗೂ ಯಲವಾಟದಿಂದ ಸೊರಬ ಮಾರ್ಗವಾಗಿ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಸಾಗರ ಸಮೀಪದ ಉಳ್ಳೂರಿನ ಸಾಗರ ಗಂಗೋತ್ರಿ ಕಾನೂನು ಮಹಾವಿದ್ಯಾಲಯದಲ್ಲಿ ದರ್ಶನ್ ಪ್ರಥಮ ವರ್ಷದ ಕಾನೂನು ಪದವಿ ಶಿಕ್ಷಣವನ್ನು ಪಡೆಯುತ್ತಿದ್ದನು. ರಸ್ತೆಯ ಬದಿಯಲ್ಲಿ ಜೋಳವನ್ನು ಒಣಗಿಸಲು ಹಾಕಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close