Girl in a jacket

ಕುಮಾರ್ ಬಂಗಾರಪ್ಪನವರಿಗೆ ಪರೋಕ್ಷವಾಗಿ ಶಾಕ್ ನೀಡಲು ಮುಂದಾಯಿತಾ ಬಿಜೆಪಿ? ಸೊರಬ ಬಿಜೆಪಿಯಿಂದ ಐವರು ಉಚ್ಚಟಿತರು



ಸುದ್ದಿಲೈವ್/ಶಿವಮೊಗ್ಗ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಶಿಸ್ತುಕ್ರಮಕ್ಕೆ ಮುಂದಾಗಿದ್ದಾರೆ. ಎಂ.ಡಿ ಉಮೇಶ್, ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಗುರುಕುಮಾರ್ ಪಾಟೀಲ್, ಶಿವನ ಗೌಡ, ಕೃಷ್ಣಮೂರ್ತಿ ಇವರನ್ನ ಪಕ್ಷದಿಂದ ಉಚ್ಚಾಟಿಸಿ ಅದೇಶಿಸಿದ್ದಾರೆ. 

ದಿನಾಂಕ 29-11-2024 ರ ಪತ್ರಿಕೆಯಲ್ಲಿ ವರದಿಯಾದಂತೆ ಸೊರಬದ ಕೆಲವು ಬಿಜೆಪಿಕಾರ್ಯಕರ್ತರು ಪಕ್ಷ ಸಂಘಟನೆಗೆ ತೊಡಕಾಗುವಂತೆ ಸಭೆ ಮಾಡಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. 

ಈ ಹಿಂದೆ ಸಹ ಇದೇ ಕಾರ್ಯಕರ್ತರುಗಳು ಹಲವು ಪ್ರಮುಖರ ಬಗ್ಗೆ ಹಗುರವಾಗಿ ಮಾತನಾಡಿದಾಗಲೂ ಕೂಡ ಪಕ್ಷ ಸಹಿಸಿಕೊಂಡು ತಿದ್ದಿಕೊಳ್ಳಲು ಅವಕಾಶ ನೀಡಿತ್ತು. ಹಾಗೂ ಪಕ್ಷದ ಆಂತರಿಕ ವಿಷಯವನ್ನು ಬಹಿರಂಗ ವೇದಿಕೆಯಾಗಲಿ, ಪತ್ರಿಕಾ ಮಾದ್ಯಮದ ಎದುರಾಗಲೀ ಚರ್ಚಿಸದಂತೆ ಅಧ್ಯಕ್ಷರು ಸೂಚಿಸಿದ್ದರು. 

ಆದಾಗಿಯೂ ಸಹ ಸಂಘಟನೆಯ ಕೆಲಸ, ಸದಸ್ಯತ್ವ ಅಭಿಯಾನ" ಮತ್ತು "ಸಂಘಟನಾ ಪರ್ವ" ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತದೇ ತಪ್ಪು ಮರುಗಳಿಸಿವೆ ಎಂದು ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಂಡಲ ಅಧ್ಯಕ್ಷರ ಮತ್ತು ಜಿಲ್ಲಾ ಅಧ್ಯಕ್ಷರ ವಿರುದ್ಧ ಮಾತನಾಡಲಾಗಿದೆಎಂದು ಅಧ್ಯಕ್ಷರು ದೂರಿದ್ದು, ಇದನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ. ಈ ರೀತಿ ನಡುವಳಿಕೆ ಪಕ್ಷದ ಶಿಸ್ತಿಗೆ ದಕ್ಕೆತರುವುದನ್ನು ಸಹಿಸಲು ಸಾಧ್ಯವಿಲ್ಲವೆಂದು ನಿರ್ಧರಿಸಿರುವ ಅವರು,  ಮಂಡಲ ಕಾರ್ಯಕರ್ತರ ಮನಸ್ಸಿನ ಭಾವನೆಯೂ ಸಹ ಇದೇ ಆಗಿದೆ. 

ಮಂಡಲ ವರದಿಯ ಮೇರೆಗೆ ಈ ಎಲ್ಲಾ ಕಾರಣಗಳಿಂದ ಎಂ.ಡಿ ಉಮೇಶ್, ವೃತ್ತಿಕೊಪ್ಪ ಮಲ್ಲಿಕಾರ್ಜುನ್, ಗುರುಕುಮಾರ್ ಪಾಟೀಲ್, ಶಿವನ ಗೌಡ, ಕೃಷ್ಣಮೂರ್ತಿ ಇವರುಗಳನ್ನು ಈ ತಕ್ಷಣ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಮೇಘರಾಜ್ ತಿಳಿಸಿದ್ದಾರೆ. 

ಉಚ್ಚಾಟಿತರೆಲ್ಲಾರು,  ಶಾಸಕ ಯತ್ನಾಳ್ ಗುಂಪಿನಲ್ಲಿ ಕಾಣಿಸಿಕೊಂಡಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪನವರ ಕಡೆಯವರಾಗಿದ್ದಾರೆ. ಮಾಜಿ ಸಚಿವರ ಹಿಂಬಾಲಕರ ವಿರುದ್ಧ ಕ್ರಮ ಕೈಗೊಂಡು ಮಾಜಿ ಸಚಿವರಿಗೆ ಶಾಕ್ ನೀಡುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಎಂಬ ಆರೋಪವೂ ಈ ಉಚ್ಚಾಟನೆಯ ಹಿಂದೆ ಕೇಳಿ ಬಂದಿದೆ. ಕುಮಾರ್ ಬಂಗಾರಪ್ಪನವರನ್ನ ಕಡೆಗಣಿಸಿ ನಮೋ ಬ್ರಿಗೇಡ್ ಗೆ ಮಣೆಹಾಕಲಾಗುತ್ತಿದೆ ಎಂಬ ಶಂಕೆಗೂ ಉಚ್ಚಾಟನೆ ಎಡೆಮಾಡಿಕೊಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close