Girl in a jacket

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಭದ್ರಾವತಿ ಶಾಖೆಯ ಅಧ್ಯಕ್ಷರಾಗಿ ಸಿದ್ದ ಬಸಪ್ಪರಿಗೆ ಭರ್ಜರಿ ಗೆಲುವು


ಸುದ್ದಿಲೈವ್/ಭದ್ರಾವತಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಭದ್ರಾವತಿ ಶಾಖೆಯ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯತ್ವಕ್ಕೆ ಇಂದು ಚುನಾವಣೆ ನಡೆದಿದ್ದು ಮೂವರನ್ನ ಮತಚಲಾವಣೆ ಮೂಲಕ ಆಯ್ಕೆ ಮಾಡಲಾಗಿದೆ. 

ಅಧ್ಯಕ್ಷ ಸ್ಥಾನದ ಚುನಾವಣೆಯು ಸಿದ್ದ ಬಸಪ್ಪ ಮತ್ತು ಡಾ.ಗಿರೀಶ್ ನಡುವೆ ಸ್ಪರ್ಧೆ ಉಂಟಾಗಿ ಮತದಾನ ನಡೆದಿದೆ.  ಸಿದ್ದಬಸಪ್ಪ ಬಿಗೆ 22 ಮತಗಳು ಲಭಿಸಿದರೆ,  ಎದುರಾಳಿ ಡಾಕ್ಟರ್ ಗಿರೀಶ್ ಅವರಿಗೆ 11 ಮತ ಲಭಿಸಿದೆ. ಸಿದ್ದ ಬಸಪ್ಪ ಬಿ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 

ಖಜಾಂಚಿ ಸ್ಥಾನಕ್ಕೆ ಪ್ರಶಾಂತ್ ಮತ್ತು ವೆಂಕಟೇಶ್ವರಪ್ಪ ನಡುವೆ ಸ್ಪರ್ಧೆಯುಂಟಾಗಿದ್ದು,  ಪ್ರಶಾಂತ್ ಗೆ  22 ಮತಗಳು, ವೆಂಕಟೇಶ್ವರಪ್ಪರಿಗೆ 12 ಮತಗಳು ಲಭಿಸಿದ್ದು, ಪ್ರಶಾಂತ್‌ ಅವರು ಜಯಗಳಿಸಿದ್ದಾರೆ. 

ರಾಜ್ಯ ಪರಿಷತ್‌ ಸದಸ್ಯರ ಆಯ್ಕಯಲ್ಲಿ ರಾಜಕುಮಾರ್ ಮತ್ತು ವೆಂಕಟೇಶ್ ಅವರ ನಡುವೆ ಮತದಾನ ನಡೆದಿದ್ದು, ರಾಜಕುಮಾ‌ರ್ ಗೆ 15 ಮತಗಳು ಮತ್ತು  ವೆಂಕಟೇಶ್ ಗೆ 19 ಮತಗಳು ಲಭಿಸಿದ್ದು, ವೆಂಕಟೇಶ್‌ ಅವರು ಜಯ ಗಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close