ಸುದ್ದಿಲೈವ್/ಶಿಕಾರಿಪುರ
ಆಸ್ತಿ ವಿಚಾರದಲ್ಲಿ ಮಗನನ್ನ ಅಪ್ಪನೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. 12 ಎಕರೆ ಬಗುರ್ ಹುಕುಂ ಜಾಗದಲ್ಲಿ 8 ಎಕರೆ ಬೆಳೆದ ಮೆಕ್ಕೆ ಜೋಳದ ವಿಚಾರದಲ್ಲಿ ತಂದೆಯೇ ಮಗನನ್ನ ಕೊಲೆ ಮಾಡಿದ್ದಾನೆ.
ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಚಿಂಗ್ಯಾನಾಯ್ಕ ಎಂಬುವರಿಗೆ ನಾಲ್ಕು ಜನ ಮಕ್ಕಳಿದ್ದಾರೆ. ನಾಲ್ಕರಲ್ಲಿ ಮೂವರು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ಮೂವರು ಗಂಡು ಮಕ್ಕಳಲ್ಲಿ ಗಂಗಾನಾಯ್ಕ್ ಕಿರಿಯರಾಗಿದ್ದು ಇವರು 12 ವರ್ಷದ ಹಿಂದೆ ಲಕ್ಷ್ಮೀ ಬಾಯಿಯನ್ನ ಪ್ರೀತಿಸಿ ಮದುವೆಯಾಗಿದ್ದಾರೆ.
ಗಂಗಾನಾಯ್ಕ್ ಲಕ್ಷ್ಮೀಬಾಯಿಯನ್ನ ಮದುವೆಯಾಗಿ ಸ್ವಲ್ಪದಿನ ತಂದೆ ತಾಯಿಯೊಂದಿಗೆ ಒಟ್ಟಿಗೆ ಇದ್ದು ನಂತರ ಬೇರೆಯಾಗಿದ್ದಾರೆ. ಚಿಂಗೂನಾಯ್ಕ್ ವಾಸವಾಗಿದ್ದ ಇದ್ದ ಮನೆಯ ಪಕ್ಕದಲ್ಲಿಯೇ ಹಟ್ಟಿಯಲ್ಲಿ ಗಂಗ್ಯಾನಾಯ್ಕ್ ವಾಸವಾಗಿದ್ದನು. 12 ಎಕರೆ ಬಗುರ್ ಹುಕುಂ ಜಾಗದಲ್ಲಿ ಯಾವಾಗಲೂ ಮೆಕ್ಕೆ ಜೋಳ ಬೆಳೆಯುತ್ತಿದ್ದ ಚಿಂಗೂನಾಯ್ಕ್ ಈ ಬಾರಿ ಬೆಳೆಯದೆ ಇದ್ದಿದ್ದರಿಂದ ಗಂಗಾನಾಯ್ಕ್ 8 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆದಿದ್ದನು.
ಗಂಗಾನಾಯ್ಕ್ ಬೆಳೆದ ಮೆಕ್ಕೆ ಜೋಳವನ್ನು ಕಟಾವ್ ಮಾಡಿಸಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹಾಕಿಕೊಂಡಿದ್ದನು. ಜೋಳವನ್ನ ಮಿಷಿನ್ ಗೆ ಹಾಕುವಸಗ ಅಡ್ಡ ಬಂದ ಚಿಂಗೂ ನಾಯ್ಕ್ ಈ ಬೆಳೆ ನನ್ನದು ಎಂದು ಖ್ಯಾತೆ ತೆಗೆದಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಗ್ರಾಮದ ಬಸ್ ನಿಲ್ದಾಣದ ಸಾರ್ವಜನಿಕ ರಸ್ತೆಯಲ್ಲಿ ಚಿಂಗೂ ಬಾಯ್ಕ್ ಕಡಗೋಲಿನಿಂದ ಗಂಗನಾಯ್ಕ್ ಎದೆ ಸೀಳಿರುವುದನ್ನ ಗಂಗನಾಯ್ಕ್ ಪತ್ನಿಗೆ ಗ್ರಾಮಸ್ಥರು ವಿಷು ಮುಟ್ಟಿಸಿದ್ದಾರೆ.
ತಕ್ಷಣವೇ ಶಿಕಾರಿಪುರ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಗಂಗನಾಯ್ಕ್ ರ ಸಾವನ್ನ ಖಚಿತ ಪಡಿಸಿದ್ದಾರೆ. ಈ ಸಂಬಂಧ ತಂದೆ ಚಿಂಗೂನಾಯ್ಕ್, ಗಂಗಾನಾಯ್ಕ್ ಸಹೋದರಿ ಪುಟ್ಟಿಬಾಯಿ ವಿರುದ್ಧ ದೂರು ದಾಖಲಾಗಿದೆ.