Girl in a jacket

ಕಳೆದು ಹೋಗಿದ್ದ ಜಿಲ್ಲಾ ಕಾಂಗ್ರೆಸ್ ಮಾಜಿ ಡಿಸಿಎಂ ಹೆಸರಿನಲ್ಲಿ ಮೈಕೊಡವಿಕೊಂಡು ಎದ್ದೇಳ್ತಾ?


ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಕಾಂಗ್ರೆಸ್ ನಲ್ಲಿ ಅಧ್ಯಕ್ಷತೆ ಬದಲಾದ ನಂತರ ಪಕ್ಷ ಅಸ್ಥಿತ್ವದಲ್ಲಿ ಇದೆಯೋ ಇಲ್ಲವೋ ಎಂಬ ಗೊಂದಲದ ಹೊತ್ತಿನಲ್ಲಿಯೇ ಪಕ್ಷ ದಿಡೀರ್ ಎಂದು ಪ್ರತಿಭಟನೆಗೆ ಮುಂದಾಗಿದೆ. 

ಅದೂ ಈಶ್ವರಪ್ಪನವರ ವಿರುದ್ಧ ಈಗಾಗಲೇ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೈರು ದಾಖಲಾಗಿ 24 ಗಂಟೆ ಕಳೆದ ನಂತರ ಬಸ್ ನಿಲ್ದಾಣದಿಂದ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ ಈಶ್ವರಪ್ಪನವರ ವಿರುದ್ಧ ಕ್ರಮಕ್ಕೆ ಪಕ್ಷ‌ ಆಗ್ರಹಿಸಿದೆ. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೊಂಡು ಈಗಾಗಲೇ 6-7 ತಿಂಗಳು ಕಳೆದಿದೆ. ಈಶ್ವರಪ್ಪನವರು ರಾಜ್ಯ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವುದು ಹೊಸದೇನಲ್ಲ. ಆದರೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಮೈಕೊಡವಿಕೊಂಡು ಮೇಲೆದ್ದ  ಜಿಲ್ಲಾ ಕಾಂಗ್ರೆಸ್ ಜೀವಂತವಾಗಿದ್ದೇವೆ ಎಂಬುದನ್ನ ಸಾಬೀತು ಪಡಿಸಲು ಪ್ರತಿಭಟನೆಗೆ ಮುಂದಾದಂತೆ ಕಂಡು ಬರುತ್ತಿದೆ. 

ಮಾಜಿ ಡಿಸಿಎಂ ಈಶ್ವರಪ್ಪ ನ.13 ರಂದು ಸುದ್ದಿಗೋಷ್ಠಿ ನಡೆಸಿ ವಕ್ಫ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ದಂಗೆ, ರಕ್ತಪಾತದ ಬಗ್ಗೆ ಮಾತನಾಡಿದ್ದಾರೆ. ಮರುದಿನ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಅವರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಕಾಂಗ್ರೆಸ್  ಈಶ್ವರಪ್ಪನವರ 48 ಗಂಟೆ ಕಳೆದ ನಂತರ ಮೈಕೊಡವಿ ನಿಂತಿದೆ. 

ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಯಾವಾಗ ಪ್ರತಿಕ್ರಿಯಿಸಬೇಕಿತ್ತು ಎಂಬ ಸಂಯಮವೂ ಇಲ್ಲವಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸುಂದರೇಶ್ ಅವರ ನೇತೃತ್ವದಲ್ಲಿಯೇ ಪಕ್ಷ ಸಕ್ಕತ್ ಚಟುವಟಿಕೆಯಿಂದ ಕೂಡಿತ್ತು. ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿರುವಾಗ ಕ್ರಮ ಕೈಗೊಳ್ಳಲು ಪಕ್ಷಕ್ಕೆ ಏನು ಸಮಸ್ಯೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close