ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ-ಗೋವಾ ನಡುವಿನ ಗಡಿಯಲ್ಲಿ ಬಿಗಿ ತಪಾಸಣೆಯ ನಡುವೆಯೂ 7 ಲೀಟರ್ ಗೂ ಅಧಿಕ ಮದ್ಯ ಪತ್ತೆಹಚ್ಚಲಾಗಿದೆ. ಅಲ್ಲಿಗೆ ಗಡಿ ತಪಾಸಣೆಗೆ ಸವಾಲಾಗುವಂತೆ ಮದ್ಯ ಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪತ್ತೆಯಾದ ಎಣ್ಣೆ ಸಂದೇಶ ನೀಡುತ್ತಿದೆ.
ಅಬಕಾರಿ ಜಂಟಿ ಆಯುಕ್ತರು ದಾವಣಗೆರೆ ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಲ್ಲಿ ಅಬಕಾರಿ ಉಪ ಅಧೀಕ್ಷಕರು ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಶಿವಮೊಗ್ಗ ವಲಯ-1 ಹಾಗೂ ಸಿಬ್ಬಂದಿಗಳು ಶಿವಮೊಗ್ಗ ನಗರದ ವಿನಾಯಕ ನಗರದ 3ನೇ ತಿರುವಿನಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಹನುಮಂತ ನಾಯ್ಕ ಬಿನ್ ಶಿವ್ಯನಾಯ್ಕ ರವರ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ವಿವಿಧ ಬ್ರಾಂಡ್ ನ ಒಟ್ಟು 7.350 ಲೀಟರ್ ಗೋವಾ ಮದ್ಯ ಜಪ್ತು ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.