Girl in a jacket

ನಗರ ಪಾಲಿಕೆಯಲ್ಲಿ ಕನ್ನಡ ಧ್ವಜ ಸ್ಥಾಪಿಸುವಂತೆ ಆಗ್ರಹ



ಸುದ್ದಿಲೈವ್/ಶಿವಮೊಗ್ಗ

ನಗರ ಪಾಲಿಕೆ ಆವರಣದಲ್ಲಿ ಶಾಶ್ವತ ಕನ್ನಡ ಧ್ವಜ  ಸ್ತಂಭವನ್ನು ಸ್ಥಾಪಿಸುವಂತೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. 

ಹಲವು ವರ್ಷಗಳ ಹೋರಾಟದ ನಂತರ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಕನ್ನಡಿಗರ ಮನಸ್ಸನ್ನು ಅರಿತು ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ಕನ್ನಡದ ಧ್ವಜವನ್ನು ಹಾರಿಸಲು ಆದೇಶವನ್ನು ಹೊರಡಿಸಿತು. 

ಅದರಂತೆ ತಾವುಗಳು ಕನ್ನಡ ಧ್ವಜವನ್ನು ಒಂದು ಕೋಲಿನ ಮೂಲಕ ಹಾಕಿರುವುದು ಕಣ್ಣಿಗೆ ಕಾಣುತ್ತಿರುವ ವಿಷಯ ಮಾನ್ಯರೇ ಕನ್ನಡ ಹೋರಾಟಗಾರರಾದ ನಮ್ಮ ಆಶಯವು ಶಾಶ್ವತ ಕನ್ನಡ ಧ್ವಜ ಸ್ತಂಭವನ್ನು ತತಕ್ಷಣದಲ್ಲೇ ನಿರ್ಮಾಣವನ್ನು ಮಾಡಿ ಕನ್ನಡ ಧ್ವಜವನ್ನು ವರ್ಷಪೂರ್ತಿ ಹಾರುವಂತೆ ನೋಡಿಕೊಳ್ಳಬೇಕು ಎಂದು  ಹೋರಾಟಗಾರರು ಮನವಿಯಲ್ಲಿ ಆಗ್ರಹಿಸಿದರು. 

ಕನ್ನಡ ರಾಜ್ಯೋತ್ಸವ ರಾಜ್ಯದ ಉದ್ದಗಲದಲ್ಲೂ ಆಚರಣೆಯಾಗುತ್ತಿದ್ದು ಐದು ದಿನ ಕಳೆದರೂ ಸಹ ಕೋಲಿನ ಸಹಾಯದಲ್ಲಿ ಧ್ವಜ ಹಾರಾಡುತ್ತಿರುವುದು ಪಾಲಿಕೆಯಲ್ಲಿ ಹಣಕ್ಕೆ ಬರ ಬಂದಿದೆ. ಎನ್ನುವ ರೀತಿಯಲ್ಲಿ ಮಾಡಿರುವುದು ಬಹಳ ಬೇಸರದ ಸಂಗತಿ ಒಂದು ಪಕ್ಷ ತಾವು ಹಣವನ್ನು ಸರ್ಕಾರದ ವತಿಯಿಂದ ಖರ್ಚು ಮಾಡಿ ಮಾಡಲು ಆಗದೆ ಇದ್ದರೆ ತಮ್ಮ ಇಲಾಖೆಯಲ್ಲಿ ಶಿವಮೊಗ್ಗ ನಗರಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಸಂಬಳದಿಂದ 50 ರೂಪಾಯಿಗಳನ್ನು ಈ ಶಾಶ್ವತ ಕನ್ನಡ ಧ್ವಜಕ್ಕೆ ಕೊಡುವುದರ ಮೂಲಕ ಶಾಶ್ವತವ್ಯಸ್ತಂಬವನ್ನು ಮಾಡಬಹುದು ಇದು ತಮಗೆ ಆಗದೆ ಇದ್ದಲ್ಲಿ ನಾವು ಕನ್ನಡ ಹೋರಾಟಗಾರರೇ ತಾವು ಅನುಮತಿ ನೀಡಿದರೆ. ಕಾನೂನಿನ ಅಡಿಯಲ್ಲಿ ಚೌಕಟ್ಟಿನಲ್ಲಿ ಕನ್ನಡ ಧ್ವಜವನ್ನು ಹಾರಿಸಲು ಶಾಶ್ವತ ಕನ್ನಡ ಧ್ವಜವನ್ನು ಪಾಲಿಕೆಯ ಆವರಣದಲ್ಲಿ ನಿಗದಿತ ಸ್ಥಳದಲ್ಲಿ ನಿರ್ಮಾಣ ಮಾಡಲು ಶಕ್ತರಿದ್ದೇವೆ ಎಂದು ಹೋರಾಟಗಾರರು ಮನವಿಯಲ್ಲಿ ಆಗ್ರಹಿಸಿದರು. 

ತಾವು ತತಕ್ಷಣದಲ್ಲೇ ಶಾಶ್ವತ ಸ್ತಂಭವನ್ನು ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ನಮ್ಮ ಸಂಘಟನೆ ತಮ್ಮ ಗಮನಕ್ಕೆ ತರಲು ಇಚ್ಚಿಸದೆ ಪಾಲಿಕೆಯ ಆವರಣದಲ್ಲಿ ಶಾಶ್ವತ ಸ್ತಂಭವನ್ನು ನೆಡುವ ಕಾರ್ಯಕ್ಕೆ ಮುಂದಾಗ ಬೇಕಾಗುತ್ತದೆ. ಮುಜುಗರಕ್ಕೆ ಒಳಗಾಗದೆ ತಾವುಗಳು ಶಾಶ್ವತ ಸ್ತಂಭವನ್ನ ನಿರ್ಮಿಸುವಂತೆ ಕನ್ನಡ ಹೋರಾಟಗಾರರು ಮನವಿಯಲ್ಲಿ ಒತ್ತಾಯಿಸಿದೆ. 

ಈ ಸಂದರ್ಭದಲ್ಲಿ  ಕನ್ನಡ ಹೋರಾಟಗಾರರಾದ ನಯಾಜ್ ,ರಘುನಂದನ್, ರಫೀಕ್, ಶಿವಣ್ಣ ,ಲಿಂಗರಾಜು, ಭರತ್, ಕುಮಾರ್, ನೂರುಲ್ಲಾ ಸೇರಿದಂತೆ 50 ಕ್ಕೂ ಹೆಚ್ಚು ಹೋರಾಟಗಾರರು  ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close