Girl in a jacket

ದೀಪಾವಳಿಯ ಎರಡು ಸೈಡ್ ಎಫೆಕ್ಟ್-ಒಂದು ಪಟಾಕಿ ಮತ್ತೊಂದು ಹೋರಿಹಬ್ಬ!


ಸುದ್ದಿಲೈವ್/ಶಿವಮೊಗ್ಗ

ದೀಪಾವಳಿ ಬಂತು ಎಂದರೆ ಮಲೆನಾಡಿನಲ್ಲಿ ಎರಡು ವಿಷಯಗಳು ಆತಂಕ ಮೂಡಿಸುತ್ತದೆ. ಒಂದು ಪಟಾಕಿ ಇನ್ನೊಂದು ಹೋರಿ ಬೆದರಿಸುವ ಸ್ಪರ್ಧೆ. ಈ ಎರಡು ಮಲೆನಾಡಿಗರನ್ನ ಹಿಂಡಿ ಹಿಪ್ಪುತ್ತದೆ. 

ದೀಪಾವಳಿಯಲ್ಲಿ ಮಕ್ಕಳು ಪಟಾಕಿ ಸಿಡಿಸಲು ಹೋಗಿ ಗಾಯಗೊಂಡಿದ್ದಾರೆ. ವೆಂಕಟೇಶನಗರ ಮತ್ತು ಶರಾವತಿ ನಗರದ ಯುವಕ ಸೇರಿದಂತೆ ನಾಲ್ವರು ಪಟಾಕಿ ಸಿಡಿಸಿ ಗಾಯಗೊಂಡಿದ್ದಾರೆ. ತಲೆ, ಕೈ ಮುಖಕ್ಕೆ ಗಾಯಗೊಂಡ ಮಕ್ಕಳು ಮೆಗ್ಗಾನ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೋರಿ ಹಬ್ಬದ ಸೈಡ್ ಎಫೆಕ್ಟ್ಸ!

ಮಲೆನಾಡಿನ ದೀಪಾವಳಿಗೆ  ಅದರಲ್ಲೂ ಸೊರಬ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಸಡಗರ ಪಡುವ ನಡುವೆ ಕೆಲ ನೋವಿನ ವಿಷಯಗಳು ಲಭ್ಯವಾಗುತ್ತದೆ. ಈ ಎರಡು ತಾಲೂಕಿನಲ್ಲಿ ದೀಪಾವಳಿಗೆ ಹೋರಿ ಹಬ್ಬವನ್ನ ಆಚರಿಸಲಾಗುತ್ತದೆ. ಹಬ್ಬಕ್ಕೆ ರೈತರು ಸಂಭ್ರಮ ಪಡುತ್ತಾರೆ. ಹೋರಿಗಳನ್ನ ಅಲಂಕಾರಗೊಳಿಸಿ ಕಿಚ್ಚು ಹಾಯಿಸಿದ್ದಾರೆ. 

ಇಂದಿನಿಂದ ಮುಂದಿನ ಮಕರ ಸಂಕ್ರಮಣ ಹಬ್ಬದ ವರೆಗೆ ಹೋರಿ ಹಬ್ಬ ಈ ಊರುಗಳಲ್ಲಿ ಸಂಭ್ರಮ ಮತ್ತು ಸಡಗರ ಪಡುವ ವಿಷಯವಾದರೂ ಕೆಲ ನೋವಿನ ಸಂಗತಿ ತಂದಿದೆ. ಹೋರಿ ಹಬ್ಬಕ್ಕೆ ಹೋದ 10 ಕ್ಕೂ ಹೆಚ್ಚು ಪ್ರಕರಣಗಳು ಗಾಯಗಳಾಗಿವೆ ಎರಡು ಪ್ರಕರಣಗಳು ಮೆಗ್ಗಾನ್ ಗೆ ಬಂದು ದಾಖಲಾಗಿದೆ. ಒಂದೇ ದಿನ 10 ಕ್ಕೂ ಹೆಚ್ಚುಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ಆತಂಕವೂ ಹೆಚ್ಚಿಸಿದೆ. 

ಶಿಕಾರಿಪುರದಲ್ಲಿ ಇಂದು ಸಂಪ್ರದಾಯಿಕ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಸುಮಾರು 12 ಕ್ಕೂ ಹೆಚ್ಚು ಹಳ್ಳಿಗೂ ಹೆಚ್ಚು ಕಡೆ ಹೋರಿ ಹಬ್ಬ ನಡೆದಿದೆ. 10 ಜನರಿಗೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸೊರಬದ ಯುವಕ ಸಂದೀಪ ಎಂಬಾತ ಶಿಕಾರಿಪುರದ ಹೋರಿಹಬ್ಬ ನೋಡಲು ಹೋದವನಿಗೆ ಹೋರಿ ತಿವಿದಿದೆ. ನಾಗರಾಜ್ ಎಂಬಾತನಿಗೆ ಬಾಯಿಗೆ ತಿವಿದ ಹೋರಿ ಬಾಯಿ ಸೀಳಿದೆ. 

ಹೋರಿ ಹಿಡಿಯಲು ಹೋದ ರಂಗನಾಥ್ ಎಂಬ ಯುವಕ ಕಾಲು ಮುರಿದಕೊಂಡಿದ್ದಾನೆ. ಈತ ಮೆಗ್ಗಾನ್ ಗೆ ದಾಖಲಾಗಿದ್ದಾನೆ. ರುದ್ರೇಶ್ಪನವರಿಗೆ ಕಿವಿ ಕಟ್ ಆಗಿಎ. ಹೋರಿ ಹಿಡಿಯಲು ಹೋದ ಆಂಜನೇಯನಿಗೆ ಎದೆಯ ಭಾಗಕ್ಕೆ ತಿವಿದಿದೆ. 

ಆಯಂಜನೇಯ ಮಾದೇನಹಳ್ಳಿಯ ಸುನೀಲ್ ಎಂಬುವರಿಗೂ ಗಂಭೀರ ಗಾಯವಾಗಿದ್ದು ಇವರೆಲ್ಲೂ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಇವೆಲ್ಲಾ ಪ್ರಕರಣಗಳು ಶಿಕಾರಿಪುರ ತಾಕೂಕಿನದವಾಗಿದೆ. ಆದರೆ ಯಾವುದೂ ಪ್ರಾಣ ಹಾನಿ ಸಂಭವಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close