ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮತ್ತು ಗ್ರಾಮಾಂತರ ಭಾಗದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಗಲಾಟೆಯಾಗಿದೆ. ಒಂದು ಪಟಾಕಿ ಹಚ್ಚುವ ವಿಷಯದಲ್ಲಿ ಗಲಾಟೆಯಾದರೆ ಮತ್ತೊಂದು ಹಬ್ಬದ ಪ್ರಯುಕ್ತ ಹಳ್ಳಿಗಳಲ್ಲಿ ನಡೆಯುವ ಸಾಂಪ್ರದಾಯಿಕ ದೀಪ ಹಚ್ಚುವ ವೇಳೆ ಗಲಾಟೆಯಾಗಿದೆ.
ರಾಗಿಗುಡ್ಡದಲ್ಲಿ ಮನೆಯ ಮುಂದೆ ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿಗೆ ಮನೆಯ ಮುಂದೆ ಪಟಾಕಿ ಹೊಡೆಯಬೇಡ ಎಂದು ಹೇಳಿದ್ದಕ್ಕೆ ಇಬ್ವರು ವ್ಯಕ್ತಿಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಇದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದರಂತೆ ಹೊಸಕೊಪ್ಪದಲ್ಲಿ ದೀಪಾವಳಿ ಹಬ್ಬಕ್ಕೆ ಬೆಳಗಿನ ಜಾವ ಹೆಣ್ಣು ಮಕ್ಕಳು ದೀಪ ಹಿಡಿದುಕೊಂಡು ಹೋಗುವಾಗ ಗ್ರಾಮದ ಶಾಲೆಯ ಬಳಿ ಬೆಂಕಿ ಹಾಕಿದ್ದು ಬೆಂಕಿ ನಂದಿಸಲು ಹೋದಾಗ ನಾಲ್ವರು ಬಂದು ಗಲಾಟೆ ನಡೆಸಿದ್ದಾರೆ. ಈಬಗ್ಗೆತುಂಗನಗರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ