Girl in a jacket

ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ತಾತ್ಕಾಲಿಕ ಪಟ್ಟಿ-ಆಕ್ಷೇಪಣೆ ಸಲ್ಲಿಸಲು ಅವಕಾಶ


ಸುದ್ದಿಲೈವ್/ಶಿವಮೊಗ್ಗ

 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ಜಿಲ್ಲೆಯ 07 ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 126 ಅಂಗನವಾಡಿ ಕಾರ್ಯಕರ್ತೆಯರು ಮತ್ತು 448 ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಬಂಧಿಸಿದ ಅಂಗನವಾಡಿ, ಗ್ರಾಮ ಪಂಚಾಯತ್, ಮಹಾನಗರಪಾಲಿಕೆ, ನಗರ ಪಾಲಿಕೆ ಮತ್ತು ಪಟ್ಟಣ ಪಂಚಾಯ್ತಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

 ಈ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣಾ ಅರ್ಜಿಗಳನ್ನು ದಿ: 04-12-2024 ರೊಳಗಾಗಿ ಸಂಬAಧಿಸಿದ ಶಿಶು ಅಭಿವೃದ್ದಿ ಯೋಜನಾ ಕಚೇರಿಗೆ ಸಲ್ಲಿಸಬಹುದು.

 ಭದ್ರಾವತಿ ತಾಲ್ಲೂಕು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕಾರ್ಯಕರ್ತೆಯರು 10, ಸಹಾಯಕಿಯರು 72, ಹೊಸನಗರ ಕಾರ್ಯಕರ್ತೆಯರು 07, ಸಹಾಯಕಿಯರು 35, ಸಾಗರ ಕಾರ್ಯಕರ್ತೆಯರು 21, ಸಹಾಯಕಿಯರು 62, ಶಿಕಾರಿಪುರ ಕಾರ್ಯಕರ್ತೆಯರು 08, ಸಹಾಯಕಿಯರು 55, ಶಿವಮೊಗ್ಗ ಕಾರ್ಯಕರ್ತೆಯರು 33, ಸಹಾಯಕಿಯರು 118, ಸೊರಬ ಕಾರ್ಯಕರ್ತೆಯರು 38, ಸಹಾಯಕಿಯರು 65 ಮತ್ತು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಕಾರ್ಯಕರ್ತೆಯರು 09 ಹಾಗೂ ಸಹಾಯಕಿರಯರು 41 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close