Girl in a jacket

ಮೆಗ್ಗಾನ್ ಗೆ ಶಾಸಕರ ದಿಡೀರ್ ಭೇಟಿ-ಅವ್ಯವಸ್ಥೆಯ ಆಗರದ ಬಗ್ಗೆ ಶಾಸಕರು ಗರಂ




ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಾಸಕ ಚೆನ್ನಬಸಪ್ಪ ಭೇಟಿ ನೀಡಿ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಹಲವು ಸಮಸ್ಯೆಗಳು ಕಂಡು ಬಂದಿದ್ದು ಅಧಿಕಾರಿಗಳ ಮೇಲೆ ಗರಂ ಆದರು.

ಮೊದಲಿಗೆ ಐಸಿಯು ವಾರ್ಡ್ ಗೆ ಭೇಟಿ ನೀಡಿದ ಶಾಸಕರು, ಹೃದಯ ಕಾಯಿಕೆ ಸಂಬಂಧ ದಾಖಲಾಗಿದ್ದ ಸಮೀರ್ ಅಹಮದ್ ಮತ್ತು ದುರ್ಗೇಶ್ ನ್ನ ಮಾತನಾಡಿಸಿದರು. ಎಂಐಸಿಯು ರಿಕವರಿ, ಎಕೋರೂಮ್ ಗಳಿಗೂ ಭೇಟಿ ನೀಡಿದರು. ಈ ವೇಳೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು ತಿಳಿದು ಬಂದಿತ್ತು.

ಆದರೆ ಎಕೋ ರೂಮ್ ಬಳಿ ಬರುತ್ತಿದ್ದಂತೆ ಸಮಸ್ಯೆಗಳ ಸರಮಾಲೆಗಳೆ ಶಾಸಕರ ಎದುರು ಕಂಡು ಬಂದಿದೆ.  ಕರುಳಲ್ಲಿಗಡ್ಡೆ ಕಾಣಿಸಿಕೊಂಡಿದ್ದ ಶ್ರೀಧರ್ ಗೂ ಉತ್ತಮ ಚಿಕಿತ್ಸೆ ಲಭಿಸಿದ್ದು ತಿಳಿದುಬಂದಿದೆ.  ಆದರೆ ಕರಳುಬಾನೆಯಿಂದ ನಾಲ್ಕು ದಿನಗಳಿಂದ ಒದ್ದಾಡುತ್ತಿದ್ದ ಬಾಲರಾಜ್ ಅವರ ಪರವಾಗಿ ಮಾತನಾಡಿದ  ದ್ರಾಕ್ಷಯಣಮ್ಮ ಬ್ಲಡ್ ಚೆಕಪ್ ಗೆ 750 ರೂ ಪಡೆದಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೂ 750 ರೂ. ಪಡೆದಿರುವುದು ತಿಳಿದು ಬಂದಿದೆ. 

ಆಪ್ತಸಮಾಲೋಚನಾಕೊಠಡಿಯಲ್ಲಿ  ಅಧಿಕಾರಿಗಳಿಗಾಗಿ ಇಂದ್ರಮ್ಮ ಕಾಯುತ್ತಿದ್ದು ಇನ್ ಟೈಮ್ ನಲ್ಲಿ ಅಧಿಕಾರಿಗಳ ಅಲಭ್ಯತೆ ಎದ್ದು ತೋರುತ್ತಿತ್ತು. ನಂತರ ಔಷಧ ಹಂಚಿಕೆ ಕಡೆ ಬಂದ ಶಾಸಕರಿಗೆ ಶಾಕ್ ನೀಡಿತ್ತು. ಔಷಧಗಳು ಹೊರಗಡೆ ಬರೆದುಕೊಡಲಾಗುತ್ತಿದೆ ಎಂಬ ಮಾಹಿತಿಗೆ ಸ್ಥಳದಲ್ಲಿರುವ ಸಿಬ್ಬಂದಿ 6-7 ಎಡಿಸಿನ್ ಗಳ ಅಲಭ್ಯತೆ ಇದೆ. ಹೊರಗಡೆ ಹೋಗಿ ತರಬೇಕಿದೆ ಎಂಬ ಮಾಹಿತಿ ಕೇಳಿ ಬಂದಿತು.  

ಮೆಡಿಸಿನ್ ಗಾಗಿ ಕಾಯುತ್ತಿದ್ದ ಧೂಳೋಜಿರಾವ್ ಮೆಡಿಸಿನ್ ಒಳಗೆ ಕೊಡ್ತಾರೆ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ಇದ್ದರೂ 1500 ಸಾವಿರ ಪಡೆದಿರುವಬಗ್ಗೆ ಮಹಿಳೆ ಶಾಸಕರಿಗೆ ಮಾಹಿತಿ ನೀಡಿದರು. ಆದರೆ ಈ ಹಣ ಎಬಿಆರ್ ಕೆ ಕಾರ್ಡ್ ಆಗಿರುವುದರಿಂದ ಮೊದಲು ಹಣ ತುಂಬಬೇಕು. ಆಮೇಲೆ ಹಣ ನೀಡುವುದಾಗಿ ಸಿಬ್ಬಂದಿಗಳು ತಿಳಿಸಿದರು‌ ಎಷ್ಟು ಜನಕ್ಕೆ ಹಣ ವಾಪಾಸ್ ಹೋಗಿದೆ ಎಂದು ಶಾಸಕರು ಕೇಳಿದರು. ಆದರೆ ಮಾಹಿತಿ ನೀಡದೆ ಇರುವುದು ಕಂಡು ಬಂದಿದೆ.  

ಇಲ್ಲಿ ಕಟ್ಟಿರುವ ಹಣ ಸ್ಮಶಾನಕ್ಕೆ ಹೋದಂತೆ ಎಂದು ಶಾಸಕರು ಗರಂ ಆದರು.  ಬಿಪಿಎಲ್ ಕಾರ್ಡ್ ಗೆ 50 % ರಿಯಾಯ್ತಿ, 30% ಎಪಿಎಲ್ ವಿನಾಯಿತಿ ಇದೆ. ಎ ಬಿಆರ್ಕೆ ಕಾರ್ಡ್ ಗೆ ಉಚಿತ ಎಂಬ ಸತ್ಯ ಆಗ ಹೊರಬಿದ್ದಿದೆ. 

ಮೆಡಿಸಿನ್ ಬಗ್ಗೆ ತಪಾಸಣೆ ನಡೆಸಿದ ಶಾಸಕರು ಉಗ್ರಾಣಕ್ಕೆ ಹೋಗಿ ಎಮೆರ್ಜೆನ್ಸಿ ಮೆಡಿಸಿನ್ ನ್ನ ಸ್ಟಾಕ್ ಇಟ್ಟುಕೊಳ್ಳ ಬೇಕು. ಮತ್ತು ವಾಂತಿ ಮಾತ್ರೆಯ ಅಲಭ್ಯತೆ ಕಂಡು ಬಂದಿದ್ದು ಅದನ್ನ ಕಳೆದ 15 ದಿನಗಳಿಂದ ಸ್ಟಾಕ್ ಇಲ್ಲದೆ ಇರುವುದು ಶಾಸಕರ ಗಮನಕ್ಕೆ ಬಂದಿದ್ದು ಈ ಚಂದಕ್ಕೆ ಆಸ್ಪತ್ರೆಗಳು ಏಕೆ ಬೇಕು ಎಂದು ಗರಂ ಆದರು.‌

ನಂತರ ಮಾತನಾಡಿದ ಶಾಸಕರು ಎಲ್ಲಾ ಸೇವೆಗಳಿಂದ ಬಡವರು ವಂಚಿತರಾಗಿದ್ದಾರೆ. ಮೆಡಿಸಿನ್ ಅಲಭ್ಯತೆ ಇದೆ. ಮೆಡಿಸಿನ್ ಅಲಭ್ಯತೆ ಇದ್ದರೆ ದಿನಕ್ಕೆ 10 ಸಾವಿರ ರೂ.ವರೆಗೆ ಖರ್ಚು ಮಾಡಲು ಆಸ್ಪತ್ರೆಗೆ ಅವಕಸಶವಿದೆ. ಯಾವುದೇ ಮೆಡಿಸಿನ್ ಲಭ್ಯವಿಲ್ಲ. ರಕ್ತಪರೀಕ್ಷೆಗೆ ಮತ್ತು ಎಂಆರ್ ಐ ಸ್ಕ್ಯಾನ್ ಗಳಿಗೆ ಬಿಪಿಎಲ್ ಕಾರ್ಡ್ ನವರ ಹಣ ಪಡೆಯಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಭೆ ನಡೆಸುವೆ ಎಂದರು. ನ.26 ರಂದು ಆರೋಗ್ಯ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿರುವ ಬೆನ್ನಲ್ಲಿ ಶಾಸಕರ ಭೇಟಿ ಗಮನಸೆಳೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close