Girl in a jacket

ಟವೆಲ್ ಬಿಗಿದು ಪತ್ನಿಯ ಕೊಲೆ



ಸುದ್ದಿಲೈವ್/ಶಿಕಾರಿಪುರ

ಪತ್ನಿಯ ಕುತ್ತಿಗೆಯನ್ನ  ಟವೆಲ್ ನಿಂದ ಬಿಗಿದು ಕೊಲೆ ಮಾಡಿರುವ ಘಟನೆ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳದಲ್ಲಿ ನಡೆದಿದೆ.

ಇಂದು ಸಂಜೆ ಅಂಬ್ಲಿಗೋಳದಲ್ಲಿ ಪತ್ನಿ ಗೌರಮ್ಮನ್ನ ಕುತ್ತಿಗೆಗೆ ಟವೆಲ್ ಸುತ್ತಿ ಕೊಲೆ ಮಾಡಿರುವ ಪತಿ ಮನುವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿ ಗೌರಮ್ಮಳಿಗೆ 28 ವರ್ಷಗಳಾಗಿದ್ದರೆ, ಮನುವಿಗೆ ಸುಮಾರು (32) ವರ್ಷ ಇರಬಹುದೆಂದು ಅಂದಾಜಿಸಲಾಗಿದೆ. 

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಮನೆಗೆ ಬಂದ ಮನು ಊಟ ಬಡಿಸಲು ಹೇಳಿದ್ದಾನೆ‌. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ಗೌರಮ್ಮ ಊಟ ಬಡಿಸಿಕೊಳ್ಳಲು ಸೂಚಿಸಿದ್ದಾಳೆ. ಇಲ್ಲಿಂದ ಆರಂಭಗೊಂಡ ಜಗಳದಲ್ಲಿ ಪತಿ ಮನು ಗೌರಮ್ಮನ ಕುತ್ತಿಗೆಯನ್ನ ಟವೆಲ್ ನಿಂದ ಬಿಗಿದು ಕೊಲೆ ಮಾಡಿದ್ದಾನೆ. 


ಪ್ರಕರಣ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತ ಗೌರಮ್ಮಳ ತಂದೆ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.ವಿವಾಹಿತ ಮಹಿಳೆ ಗೌರಮ್ಮ ಶಿಕಾರಿಪುರದ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇವಿಷ್ಟು ಪ್ರಾಥಮಿಕ ಮಾಹಿತಿಗಳಾಗಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close